ಬಣ್ಣ ಬಣ್ಣದ ಅಂದದ ಪಕ್ಷಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಪಕ್ಷಿಗಳ ಬಗ್ಗೆ ಗೊತ್ತಿರದ ಹಲವು ಸಂಗತಿಗಳಿವೆ. ಇವತ್ತು ನಾವು ಇಂತಹುದೇ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ.
ಮರದ ಕೊಂಬೆಗಳ ಮೇಲೆ ಅಥವಾ ವಿದ್ಯುತ್ ತಂತಿಗಳ ಮೇಲೆ ಪಕ್ಷಿಗಳು ನಿಲ್ಲುವುದು, ಮಲಗುವುದನ್ನು ನೀವು ಯಾವತ್ತಾದ್ರು ನೋಡಿರಬಹುದು. ಆದರೆ ಈ ಪಕ್ಷಿಗಳು ಇಷ್ಟು ಎತ್ತರದಲ್ಲಿ ಹೇಗೆ ಮಲಗುತ್ತವೆ? ಅವು ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ.
ಪಕ್ಷಿಗಳು ಎತ್ತರದಿಂದ ಬೀಳದಿರಲು 2 ಮುಖ್ಯ ಕಾರಣಗಳಿವೆ. ಮೊದಲ ಕಾರಣವೆಂದರೆ ಪಕ್ಷಿಗಳ ಉಗುರುಗಳು ಬಲವಾದ ಹಿಡಿತವನ್ನು ಹೊಂದಿರುತ್ತವೆ. ಆದ್ದರಿಂದ ಅವುಗಳು ವಿದ್ಯುತ್ ತಂತಿಗಳು ಅಥವಾ ಕೊಂಬೆಗಳ ಮೇಲೆ ಕುಳಿತಾಗ, ಅವು ತಮ್ಮ ಉಗುರುಗಳ ಸಹಾಯದಿಂದ ತಮ್ಮನ್ನು ಸ್ಥಳದಲ್ಲಿ ಲಾಕ್ ಮಾಡಿಕೊಳ್ಳುತ್ತದೆ.
ಮತ್ತೊಂದು ಕಾರಣವೆಂದರೆ ಅವು ಎಂದಿಗೂ ಎರಡೂ ಕಣ್ಣುಗಳನ್ನು ಮುಚ್ಚಿ ಮಲಗುವುದಿಲ್ಲ, ಯಾವಾಗಲೂ ಒಂದು ಕಣ್ಣು ತೆರೆದಿರುತ್ತವೆ. ಈ ತೆರೆದ ಕಣ್ಣಿನಿಂದಾಗಿ, ಅವುಗಳು ಮಲಗಿರುವಾಗಲೂ ಅದರ ಮೆದುಳು ಅರ್ಧದಷ್ಟು ಸಕ್ರಿಯವಾಗಿರುತ್ತದೆ. ಈ ಕ್ರಿಯಾಶೀಲ ಮನಸ್ಸಿನಿಂದಾಗಿ, ಪಕ್ಷಿಗಳು ತಂತಿಗಳ ಮೇಲೆ ಮಲಗಿರುವಾಗಲೂ ಜಾಗೃತವಾಗಿರುತ್ತವೆ. ಇದೆ 2 ಕಾರಣದಿಂದ ಪಕ್ಷಿಗಳು ತಂತಿ ಹಾಗೂ ಕೊಂಬೆ ಮೇಲೆ ಆರಾಮಾಗಿ ನಿದ್ರೆ ಮಾಡುತ್ತವೆ.