ಹಣ್ಣಿನ ರಾಜ ಮಾವು ಎಲ್ಲರಿಗೂ ಪ್ರಿಯ. ಸಿಹಿ, ರಸಭರಿತ ಹಣ್ಣು ಬಹುಪಾಲು ಜನರ ಫೇವರೆಟ್. ಆದರೆ ಕೆಲವರು ಕೇವ ಹಣ್ಣನ್ನು ಮಾತ್ರ ತಿಂದು ಸಿಪ್ಪೆ ಬಿಸಾಡಿ ಬಿಡುತ್ತಾರೆ. ಹಲವರು ಮಾವಿನ ಸಿಪ್ಪೆಯನ್ನು ತಿನ್ನಬಹುದೇ? ಎಂದು ಆಶ್ಚರ್ಯಕರವಾಗಿ ಕೇಳುತ್ತಾರೆ. ಅದಕ್ಕೆ ಉತ್ತರ ಹೌದು.
ಮಾವಿನ ಸಿಪ್ಪೆಯು ನಿಜಕ್ಕೂ ಉತ್ತಮವಾಗಿದ್ದು, ಪೋಷಕಾಂಶಗಳಿಂದ ಕೂಡಿದೆ. ಇವತ್ತು ಮಾವಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು, ಅಪಾಯಗಳನ್ನು ವಿವರಿಸುತ್ತೇವೆ.
ಮಾವಿನ ಸಿಪ್ಪೆಯು ಬಹುಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಆಮ್ಲಜನಕದಿಂದ ರಕ್ಷಿಸುವ ಆಂಟಿಆಕ್ಸಿಡೆಂಟ್‌ಗಳು, ಉರಿಯೂತವನ್ನು ಕಡಿಮೆ ಮಾಡುವ ಮ್ಯಾಂಗಿಫೆರಿನ್, ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ A, C, E ಸೇರಿದಂತೆ ಹಲವಾರು ಪೋಷಕಾಂಶ ಸಂಯುಕ್ತಗಳು ಅಡಗಿವೆ.
ಸಿಪ್ಪೆಯು ಉತ್ತಮ ಪ್ರಮಾಣದ ಆಹಾರ ನಾರುಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಜೊತೆಗೆ ದೇಹದ ಕೋಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಮಾವಿನ ಸಿಪ್ಪೆ ಉತ್ತಮವಾದರೂ, ಕೆಲವು ಅಪಾಯಗಳು ಇವೆ:
ಮಾವಿನ ಸಿಪ್ಪೆ ಉರುಶಿಯೋಲ್ ಎಂಬ ಸಂಯುಕ್ತವನ್ನು ಹೊಂದಿರಬಹುದು. ಇದು ವಿಷಕಾರಿ ಈವಿ (Ivy) ಗಿಡದಲ್ಲೂ ಕಂಡುಬರುವ ಅಂಶ. ಕೆಲವವರಿಗೆ ಇದರಿಂದ ತುರಿಕೆ, ತ್ವಚೆಯ ಅಲರ್ಜಿ, ಅಥವಾ ಚರ್ಮ ಉರಿಯುವ ಲಕ್ಷಣಗಳು ಕಾಣಿಸಬಹುದು.
ಮಾವಿನ ಮರಕ್ಕೆ ಸಿಂಪಡಿಸುವ ಕೀಟನಾಶಕ. ಸಾವಯವವಲ್ಲದ ಮಾವುಗಳಲ್ಲಿ ಇವುಗಳು ಸಿಪ್ಪೆಯ ಮೇಲ್ಭಾಗದಲ್ಲಿ ಕೀಟನಾಶಕ ಹೆಚ್ಚಿರಬಹುದು. ಹೀಗಾಗಿ ಸಿಪ್ಪೆ ಸೇವನೆಗೂ ಮುನ್ನ ಸರಿಯಾಗಿ ತೊಳೆದು ಸೇವಿಸುವುದು ಬಹುಮುಖ್ಯ.