DO YOU KNOW? | ಟಾಯ್ಲೆಟ್ ಫ್ಲಶ್‌ನಲ್ಲಿ 2 ಬಟನ್ ಯಾಕಿರುತ್ತೆ ಗೊತ್ತಾ? ಇದ್ರಿಂದ ಉಪಯೋಗ ಏನು?

ಈಗಿನ ಜೀವನ ಶೈಲಿಯಲ್ಲಿ ಎಲ್ಲರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋದವರೇ ಹೆಚ್ಚು. ಮಲಗುವ ಕೋಣೆಯಿಂದ ಶೌಚಾಲಯದವರೆಗೆ ಎಲ್ಲವೂ ಆಧುನಿಕರಣಗೊಂಡಿದೆ. ಹಿಂದಿನ ಕಾಲದಲ್ಲಿ ಶೌಚಾಲಯವಿಲ್ಲದೇ ಒದ್ದಾಡುತ್ತಿದ್ದ ಜನರು ಈಗ ತಮ್ಮ ಮನೆಗಳಲ್ಲಿ ಎರಡೆರಡು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಈಗಂತೂ ಪಾಶ್ಚಿಮಾತ್ಯ ಶೌಚಾಲಯಗಳನ್ನು ಜನರು ಹೆಚ್ಚಾಗಿ ಬಳಸಲು ಶುರು ಮಾಡಿದ್ದಾರೆ. ಆದರೆ ಎಂದಾದರೂ ಪಾಶ್ಚಿಮಾತ್ಯ ಶೌಚಾಲಯದ ಫ್ಲಶ್​ ನಲ್ಲಿ ಎರಡು ಬಟನ್​ಗಳು ಏಕಿದೆ ಅಂತ ಯೋಚಿಸಿದ್ದೀರಾ?.

ನೋಡಲು ವಿಭಿನ್ನವಾಗಿರುವ ಫ್ಲಶ್​ ಬಟನ್​ನಲ್ಲಿ ಒಂದು ಚಿಕ್ಕದಾದ ಬಟನ್ ಇದ್ದರೆ, ಮತ್ತೊಂದರಲ್ಲಿ ದೊಡ್ಡ ಬಟನ್ ಇದೆ. ಇದು ಯಾಕೆ ಗೊತ್ತಾ? ಇಲ್ಲಿದೆ ಉತ್ತರ.

ಟಾಯ್ಲೆಟ್ ಫ್ಲಶ್‌ನಲ್ಲಿ ಎರಡು ಬಟನ್ ಗಳಿವೆ. ನೀವು ಸಣ್ಣ ಫ್ಲಶ್ ಬಟನ್ ಒತ್ತಿದಾಗ, ಶೌಚಾಲಯವನ್ನು ಸ್ವಚ್ಛಗೊಳಿಸಲು ಸುಮಾರು 3 ಲೀಟರ್ ನೀರು ಬರುತ್ತದೆ. ಅದೇ ರೀತಿ ನೀವು ದೊಡ್ಡ ಫ್ಲಶ್ ಬಟನ್ ಒತ್ತಿದಾಗ ಸುಮಾರು 6 ಲೀಟರ್ ನೀರು ಬರುತ್ತದೆ. ಒಟ್ಟಾರೆ ಈ ಎರಡೂ ಫ್ಲಶ್‌ ಬಟನ್ ಗಳನ್ನು ಕಡಿಮೆ ಮತ್ತು ಹೆಚ್ಚು ನೀರನ್ನು ಬಿಡುಗಡೆ ಮಾಡಲು ಬಳಸಲಾಗುತ್ತದೆ. ಒಂದು ವೇಳೆ ಎರಡೂ ಫ್ಲಶ್‌ ಬಟನ್ ಗಳನ್ನು ಒತ್ತಿದಾಗ, ವಿಭಿನ್ನ ಪ್ರಮಾಣದ ನೀರು ಹೊರಬರುತ್ತದೆ.

ಮೂತ್ರ ವಿಸರ್ಜನೆಯ ನಂತರ ಜನರು ಚಿಕ್ಕ ಫ್ಲಶ್‌ ಬಟನ್ ಒತ್ತಬೇಕು. ಇದರಿಂದ ನೀರು ಕಡಿಮೆ ಬಿಡುಗಡೆಯಾಗುತ್ತದೆ. ಮಲವಿಸರ್ಜನೆಯ ನಂತರ ಹೆಚ್ಚು ನೀರು ಹೊರ ಬರಲು ಮತ್ತು ಶೌಚಾಲಯವನ್ನು ಸ್ವಚ್ಛಗೊಳಿಸಲು ಸಾಧ್ಯವಾದಷ್ಟು ದೊಡ್ಡ ಫ್ಲಶ್‌ ಬಟನ್ ಒತ್ತಬೇಕು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!