ನಟ ವಿಕ್ಕಿ ಕೌಶಲ್ ಯಾವಾಗಲೂ ಹೇಗೆ ಇರುತ್ತಾರೆ ಗೊತ್ತಾ?: ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ಕತ್ರಿನಾ ಕೈಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕತ್ರಿನಾ ಕೈಫ್ ತನ್ನ ಪತಿ, ನಟ ವಿಕ್ಕಿ ಕೌಶಲ್ ಕುರಿತು ಮಾತನಾಡಿದ್ದಾರೆ. ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ ಎಂದು ಪತಿಯ ನಡೆಗೆ ಕತ್ರಿನಾ ಕೈಫ್ ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ, ತೂಕ ಹೆಚ್ಚಾಗುವ ಕುರಿತು, ಬ್ಯೂಟಿ, ಔಟ್‌ಫಿಟ್‌ಗಳ ಬಗ್ಗೆ ಮಾತನಾಡುವಾಗ ವಿಕ್ಕಿ ಕೌಶಲ್ ಹ್ಯಾಂಡಲ್ ಮಾಡುವ ರೀತಿಯನ್ನು ಕತ್ರಿನಾ ವಿವರಿಸಿದ್ದಾರೆ. ನಾನು ವಿಕ್ಕಿ ಜೊತೆ ಹೊರಗಡೆ ಹೋಗುವಾಗ ತೂಕ ಹೆಚ್ಚಾಗಿರುವ ಬಗ್ಗೆ ಲುಕ್ಸ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತೇನೆ.

ಆಗ ವಿಕ್ಕಿ, ನೀವು ಹೇಗಿದ್ದರೂ ಪರವಾಗಿಲ್ಲ. ನೀವು ನೀವಾಗಿರಿ, ನೀವು ಹೇಗಿದ್ದಿರೋ ಹಾಗೆ ಇರಿ ಎಂದು ಕೂಲ್ ಆಗಿ ಹೇಳುತ್ತಾರೆ. ಅವರು ಸದಾ ನನ್ನ ಬೆಂಬಲವಾಗಿ ನಿಂತಿದ್ದಾರೆ ಎಂದು ದಾಂಪತ್ಯದ ಬಗ್ಗೆ ಕತ್ರಿನಾ ಮಾತನಾಡಿದ್ದಾರೆ.

ಅಂದಹಾಗೆ, 2021ರಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!