ಅವಧಿ ಮುಗಿದರೂ ದೇಶದಲ್ಲಿ ಇನ್ನೂ ಎಷ್ಟಿದ್ದಾರೆ ಗೊತ್ತಾ ವಿದೇಶಿಯರು?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೀಸಾ ಅವಧಿ 2020ರಲ್ಲಿಯೇ ಮುಗಿದ ಬಳಿಕವೂ ದೇಶದಲ್ಲಿ 40,000ಕ್ಕೂ ಹೆಚ್ಚು ವಿದೇಶಿಯರು ಇನ್ನೂ ನೆಲೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯ, 2019ರಲ್ಲಿ ವೀಸಾ ಅವಧಿ ಮುಗಿದ ನಂತರ ದೇಶದಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಗಳ ಸಂಖ್ಯೆ 54,576ರಷ್ಟಿತ್ತು. ಆದರೆ 2020ರಲ್ಲಿ 40,239 ವಿದೇಶಿಯರು ದೇಶದಲ್ಲಿ ನೆಲೆಸಿದ್ದಾರೆ.

ವೀಸಾ ದಿನಾಂಕವನ್ನು ಮುಗಿದ ನಂತರವೂ ದೇಶದಲ್ಲಿ ಉಳಿದುಕೊಂಡರೆ ದಂಡ, ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದೇಶಕ್ಕೆ ಮತ್ತೆ ಪ್ರವೇಶಿಸುವುದನ್ನು ನಿಷೇಧಿಸಲಾಗುತ್ತದೆ. ವೀಸಾ ಮುಗಿದ 15 ದಿನಗಳ ವರೆಗೆ ನೆಲೆಸಿದರೆ ದಂಡವು ಶೂನ್ಯವಾಗಿರುತ್ತದೆ. 16-30 ದಿನಗಳವರೆಗೆ ಇದ್ದರೆ 10,000 ರೂ., 31-90 ದಿನಗಳವರೆಗೆ ಇದ್ದರೆ 20,000 ರೂ. ಮತ್ತು 90 ದಿನಗಳನ್ನು ಮೀರಿದರೆ 50,000 ರೂ. ವಿಧಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!