January19, 2026
Monday, January 19, 2026
spot_img

Health Tips | ಬೆಳಗ್ಗೆ ಒಂದು ತುಳಸಿ ಎಲೆ ತಿನ್ನೋದ್ರಿಂದ ಎಷ್ಟು ಆರೋಗ್ಯ ಲಾಭಗಳಿವೆ ಗೊತ್ತಾ?

ಭಾರತೀಯ ಸಂಪ್ರದಾಯದಲ್ಲಿ ತುಳಸಿ ಸಸ್ಯವು ಕೇವಲ ಪವಿತ್ರ ಸಸ್ಯವಷ್ಟೇ ಅಲ್ಲ, ದೇವತೆಯ ಸ್ಥಾನವನ್ನು ಪಡೆದ ಸಸ್ಯವಾಗಿದೆ. ಹೀಗಾಗಿ ಪ್ರತಿ ಹಿಂದು ಮನೆಯಲ್ಲೂ ತುಳಸಿಯನ್ನು ನೆಟ್ಟು ಪೂಜಿಸುವ ಪದ್ಧತಿ ಇದೆ. ಧಾರ್ಮಿಕವಾಗಿ ಮಹತ್ವ ಪಡೆದಿರುವ ತುಳಸಿ, ಆಯುರ್ವೇದದಲ್ಲಿಯೂ ವಿಶೇಷ ಸ್ಥಾನ ಪಡೆದಿದೆ. ಅನೇಕ ಕಾಯಿಲೆಗಳಿಗೆ ಇದು ರಾಮಬಾಣ ಔಷಧಿಯಂತೆ ಕೆಲಸಮಾಡುತ್ತದೆ. ವಿಶೇಷವಾಗಿ ಮುಂಜಾನೆ ಎದ್ದು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳಿವೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತುಳಸಿಯಲ್ಲಿ ಆ್ಯಂಟಿಆಕ್ಸಿಡಂಟ್‌ಗಳು ಮತ್ತು ಸಾರಭೂತ ತೈಲಗಳು ಹೆಚ್ಚಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ನಿರಂತರ ಸೇವನೆಯಿಂದ ದೇಹ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಬಲವಾಗಿ ಹೋರಾಡಲು ಸಾಧ್ಯವಾಗುತ್ತದೆ.

ದೇಹವನ್ನು ಡಿಟಾಕ್ಸಿಫೈ ಮಾಡುತ್ತದೆ

ತುಳಸಿ ದೇಹವನ್ನು ನಿರ್ವಿಷಗೊಳಿಸುವ (Detoxify) ಗುಣ ಹೊಂದಿದೆ. ಹೊಟ್ಟೆಯಲ್ಲಿರುವ ವಿಷಕಾರಿ ಅಂಶಗಳನ್ನು ದೂರ ಮಾಡಿ, ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಶಕ್ತಿ ಸುಧಾರಣೆಗೂ ಸಹಾಯಕ.

ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ

ತುಳಸಿ ಎಲೆಗಳಲ್ಲಿ ಇರುವ ಅಡಾಪ್ಟೋಜೆನಿಕ್ ಸಂಯುಕ್ತಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ನಿಯಮಿತ ಸೇವನೆಯಿಂದ ಹಾರ್ಮೋನ್‌ಗಳ ಸಮತೋಲನ ಕಾಪಾಡಿ, ಮನಸ್ಸಿಗೆ ಶಾಂತಿ ನೀಡುತ್ತವೆ.

ಉಸಿರಾಟದ ಸಮಸ್ಯೆಗಳಿಗೆ ಪರಿಹಾರ

ತುಳಸಿಯಲ್ಲಿ ಇರುವ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಕಫ, ಅಸ್ತಮಾ ಮತ್ತು ಇತರ ಉಸಿರಾಟದ ತೊಂದರೆಗಳನ್ನು ತಗ್ಗಿಸಲು ಸಹಕಾರಿಯಾಗುತ್ತವೆ. ಉಸಿರಾಟದ ಆರೋಗ್ಯವನ್ನು ಸುಧಾರಿಸಲು ತುಳಸಿ ಎಲೆಗಳ ಸೇವನೆ ಉತ್ತಮ.

ಸಕ್ಕರೆ ಕಾಯಿಲೆ ನಿಯಂತ್ರಣ

ತುಳಸಿ ಎಲೆಗಳು ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಸುಧಾರಿಸುತ್ತವೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿರುತ್ತದೆ. ಮಧುಮೇಹ ರೋಗಿಗಳಿಗೆ ತುಳಸಿ ಸೇವನೆ ಬಹಳ ಉಪಯುಕ್ತವೆಂದು ತಜ್ಞರು ಹೇಳುತ್ತಾರೆ.

Must Read