ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ 2017 ರಲ್ಲಿ 3.5 ಮಿಲಿಯನ್‌ನಿಂದ 2023 ರಲ್ಲಿ 3.8 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಅಂಕಿ ಅಂಶಗಳ ಬ್ಯೂರೋ (PBS) ವರದಿ ಬಿಡುಗಡೆ ಮಾಡಿದೆ.
ಪಾಕಿಸ್ತಾನದ ವರದಿಯ ಪ್ರಕಾರ, 2023 ರಲ್ಲಿ ಪಾಕಿಸ್ತಾನದ ಒಟ್ಟು ಜನಸಂಖ್ಯೆ 240.46 ಮಿಲಿಯನ್ ಆಗಿದೆ. ಮುಸ್ಲಿಮರ ಪಾಲು 96.47% ರಿಂದ 96.35% ಕ್ಕೆ ಸ್ವಲ್ಪ ಕಡಿಮೆಯಾಗಿದೆ. ಕ್ರಿಶ್ಚಿಯನ್ನರ ಜನಸಂಖ್ಯೆ 2.6 ಮಿಲಿಯನ್‌ನಿಂದ 3.3 ಮಿಲಿಯನ್‌ಗೆ ಏರಿದ್ದು, ಅವರ ಪಾಲು 1.27% ರಿಂದ 1.37% ಕ್ಕೆ ಹೆಚ್ಚಾಗಿದೆ.
ಈ ಗತಿಯಲ್ಲಿ 2050 ರ ವೇಳೆಗೆ ಜನಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಪುರುಷರ ಸಂಖ್ಯೆ 124.32 ಮಿಲಿಯನ್, ಮಹಿಳೆಯರ ಸಂಖ್ಯೆ 117.15 ಮಿಲಿಯನ್, ಮತ್ತು ಟ್ರಾನ್ಸ್‌ಜೆಂಡರ್ ಜನಸಂಖ್ಯೆ 20,331 ಎಂದು ವರದಿಯಾಗಿದೆ.