ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ಕೊರೋನಾ ಪ್ರಮಾಣ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಕೇವಲ ಒಂದು ತಿಂಗಳ ಅವಧಿಯಲ್ಲಿ ಕೋವಿಡ್ (Covid-19) ಸಮಸ್ಯೆಗಳಿಂದ ಸುಮಾರು 60,000 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋವಿಡ್ ವಿರುದ್ಧದ ಶೂನ್ಯ ಸಹನೆ ನೀತಿಯನ್ನು ಕೈಬಿಟ್ಟ ಬಳಿಕ ಚೀನಾವು ಕೋವಿಡ್ ಸಾವಿಗೆ ಸಂಬಂಧಿಸಿ ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದು, ಇದರ ಮಧ್ಯೆಯೇ ಅಂಕಿಅಂಶ ಬಿಡುಗಡೆ ಮಾಡಲಾಗಿದೆ.
2022ರ ಡಿಸೆಂಬರ್ 8ರಿಂದ 2023ರ ಜನವರಿ 12ರ ಅವಧಿಯಲ್ಲಿ 59,938 ಮಂದಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಈ ಪೈಕಿ 5,503 ಮಂದಿ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಮೃತಪಟ್ಟರೆ 54,435 ಮಂದಿ ನೇರವಾಗಿ ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಸಮಿತಿ (NHC) ತಿಳಿಸಿದೆ.