ಸಕ್ಕರೆ ತಿನ್ನೋದಕ್ಕೆ ಎಷ್ಟು ರುಚಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರ. ಚಾಕೊಲೇಟ್, ಚಹಾ, ಕಾಫಿ, ಬಿಸ್ಕತ್ತು, ಜ್ಯೂಸ್, ಸಾಸ್ ಮತ್ತು ಪ್ಯಾಕೆಜ್ಡ್ ಫುಡ್ ಗಳಲ್ಲಿ ಸಕ್ಕರೆ ಇದ್ದೆ ಇರುತ್ತದೆ.
ಇಂದಿನ ದಿನಗಳಲ್ಲಿ ಬಹುತೇಕ ತಿಂಡಿಗಳು ಸಕ್ಕರೆ ಇಲ್ಲದೆ ಮಾರುಕಟ್ಟೆಗೆ ಬರೋದೆ ಇಲ್ಲ. ಹೀಗಾಗಿ ನಾವು ತಿನ್ನುವ ಪ್ರತಿಯೊಂದು ಆಹಾರದಿಂದ ನಮ್ಮ ದೇಹದಲ್ಲಿ ಮಧುಮೇಹ, ಬೊಜ್ಜು ಮತ್ತು ಕೊಬ್ಬು ಸಂಬಂಧಿತ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ.
ಹಾಗಿದ್ರೆ, ಆರೋಗ್ಯಯುತ ವ್ಯಕ್ತಿಯ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಬೇಕು. ಸಕ್ಕರೆಯನ್ನು ಎಷ್ಟಕ್ಕಿಂತ ಹೆಚ್ಚು ಸೇವಿಸಿದರೆ, ದೇಹಕ್ಕೆ ಅಪಾಯಕಾರಿ ಎನ್ನುವ ಪ್ರಶ್ನೆ ನಿಮ್ಮಲ್ಲೂ ಇದ್ರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಸರ್ಕಾರದ ಮಾರ್ಗಸೂಚಿ ಪ್ರಕಾರ, ಆರೋಗ್ಯ ಇಲಾಖೆಯ ಸೂಚನೆ ಪ್ರಕಾರ ನಾವು ಪ್ರತಿನಿತ್ಯ ಸೇವಿಸುವ ಆಹಾರ ಅಥವಾ ಕುಡಿಯುವ ಪಾನೀಯಗಳಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಅಂಶ ಇರಬಾರದು.
ಉದಾಹರಣೆಗೆ ದಿನಕ್ಕೆ ನಾವು 100 ಕ್ಯಾಲರಿಯಷ್ಟು ಶಕ್ತಿ ನೀಡುವ ಆಹಾರವನ್ನು ಸೇವಿಸಿದರೆ, ಇದ್ರಲ್ಲಿ ಶೇ.5ರಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶ ಇರಬೇಕು. ಶೇಖಡ ಐದಕ್ಕಿಂತ ಹೆಚ್ಚಿಗೆ ಪ್ರಮಾಣದಲ್ಲಿ ಸಕ್ಕರೆಯ ಅಂಶವನ್ನು ನಾವು ಸೇವಿಸಿದರೆ ಅದು ದೇಹಕ್ಕೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ.
ಆರೋಗ್ಯ ತಜ್ಞರು ಹೇಳುವ ಪ್ರಕಾರ, ನೇರವಾಗಿ ಸಕ್ಕರೆಯನ್ನೇ ಸೇವಿಸುವುದಕ್ಕಿಂತಲೂ ಸಕ್ಕರೆಯ ಅಂಶ ಇರುವ ಆಹಾರಗಳಿಗೆ ನಾವು ಮತ್ತಷ್ಟು ಸಕ್ಕರೆಯನ್ನು ಸೇರಿಸಿಕೊಂಡು ತಿನ್ನುವುದು ಅಪಾಯಕಾರಿ. ಇದರಿಂದ ಸ್ಥೂಲಕಾಯವೂ ಹೆಚ್ಚಾಗುತ್ತದೆ. ಮಧುಮೇಹ ಸೇರಿದಂತೆ ಇನ್ನಿತರ ಸಮಸ್ಯೆಗಳು ಉಂಟಾಗುತ್ತವೆ.