VIRAL| ಸೋಶಿಯಲ್ ಮೀಡಿಯಾ ಸೆನ್ಸೇಷನ್ ‘Apple Apple’ ಹಾಡು ಮಾಡಿ ಶಿಕ್ಷಕ ದುಡಿದ್ದಿದ್ದೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವ ಆಪಲ್ ಆಪಲ್ ರೆಡ್ ರೆಡ್ ಆಪಲ್ ವೆರಿ ವೆರಿ ಸ್ವೀಟ್ ಆಪಲ್ ಹಾಡನ್ನು ಮಕ್ಕಳಿಂದ ಹಾಡಿಸಿ ರೆಕಾರ್ಡ್ ಮಾಡಿದ ಶಿಕ್ಷಕ ಇದೀಗ ಕೋಟಿ ಕೋಟಿ ಗಳಿಸುತ್ತಿದ್ದಾರೆ.

ಹಾಡು ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಮಂದಿ ಇದನ್ನು ರಿಕ್ರಿಯೇಟ್ ಮಾಡಿದ್ದಾರೆ. ಇದರಿಂದಾಗಿ ಶಿಕ್ಷಕ ೩೩ ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಆರು ವರ್ಷಗಳ ಹಿಂದೆ ಈ ಹಾಡನ್ನು ಅಪ್‌ಲೋಡ್ ಮಾಡಲಾಗಿದೆ. ಶಿಕ್ಷಕ ಬಿಕ್ಕಿ ಶ್ರೀನಿವಾಸುಲು ಆಂಧ್ರಪ್ರದೇಶದ ಅನಂಪುರದ ಕಲ್ಯಾಣ ದುರ್ಗದ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಮಕ್ಕಳು ಇಂಗ್ಲಿಷ್‌ಗೆ ಭಯ ಬೀಳಬಾರದು ಎಂದು ಶಿಕ್ಷಕ ಶ್ರೀನಿವಾಸುಲು ಹಾಡಿನ ಮೂಲಕ ಇಂಗ್ಲಿಷ್ ಕಲಿಸುವ ಪ್ರಯತ್ನ ಮಾಡಿದ್ದಾರೆ. ಯುಟ್ಯೂಬ್‌ನಲ್ಲಿ ೧೮೯ ಕೋಟಿ ಬಾರಿ ವಿಡಿಯೋ ವೀಕ್ಷಣೆಯಾಗಿದೆ. ಶ್ರೀನಿವಾಸುಲು ಅವರ ಯುಟ್ಯೂಬ್ ಚಾನೆಲ್‌ಗೆ ೫೦ ಲಕ್ಷಕ್ಕೂ ಅಧಿಕ ಸಬ್ಸ್‌ಕ್ರೈಬರ‍್ಸ್ ಇದ್ದಾರೆ.

ಇದೇ ಮಕ್ಕಳಿಗೆ ಇಂಗ್ಲಿಷ್ ಕಲಿಸಿದ ಬಟರ್‌ಫ್ಲೈ ಹಾಡು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!