ನಮ್ಮ ಮೆಟ್ರೋದಲ್ಲಿ ತಿಂಡಿ ತಿಂದಿದ್ದಕ್ಕೆ ಫೈನ್‌ ಕಟ್ಟಿದ ಯುವತಿ, ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋದಲ್ಲಿ ತಿಂಡಿ ತಿನ್ನಬಾರದು, ಜ್ಯೂಸ್‌ ಇತ್ಯಾದಿಗಳನ್ನು ಕುಡಿಯಬಾರದು ಎನ್ನುವ ರೂಲ್ಸ್‌ ಇದೆ. ಹೀಗಿರುವಾಗ ಯುವತಿಯೊಬ್ಬರು ರೂಲ್ಸ್‌ ಬ್ರೇಕ್‌ ಮಾಡಿ ದಂಡ ಕಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಮ್ಮ ಮೆಟ್ರೋ, ನಮ್ಮ ಮೆಟ್ರೋದಲ್ಲಿ ಮಾದಾವರದಿಂದ ಮಾಗಡಿ ರಸ್ತೆವರೆಗೆ ಪ್ರತಿದಿನ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಬ್ಬರಿಗೆ ಮೆಟ್ರೋ ನಿಯಮಳನ್ನು ಉಲ್ಲಂಘಿಸಿದ್ದಕ್ಕಾಗಿ ಇಂದು 500 ರೂಪಾಯಿ ದಂಡ ವಿಧಿಸಲಾಗಿದೆ. ಶನಿವಾರದಂದು ಮೆಟ್ರೋದಲ್ಲಿ ಪ್ರಯಾಣಿಸುವಾಗ ರೈಲಿನೊಳಗೆ ಊಟ ಮಾಡಿದ್ದು, ಇದನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದಿದೆ.

ಇಂದು ಬೆಳಗ್ಗೆ ನೈಸ್ ರಸ್ತೆ ಜಂಕ್ಷನ್‌ನಲ್ಲಿರುವ ಮಾದಾವರ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದಾಗ ಭದ್ರತಾ ಸಿಬ್ಬಂದಿ ಅವರಿಗೆ ದಂಡ ವಿಧಿಸಿದ್ದಾರೆ. ಬೆಂಗಳೂರು ಮೆಟ್ರೋ ಆವರಣದೊಳಗೆ ಮತ್ತು ರೈಲುಗಳಲ್ಲಿ ಆಹಾರ ಸೇವಿಸುವುದನ್ನು ಮತ್ತು ಪಾನೀಯಗಳನ್ನು ಕುಡಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಮೆಟ್ರೋ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಬಹಳ ಒಳ್ಳೆಯ ಕ್ರಮ. ದಂಡ ವಿಧಿಸದ ಹೊರತು ನಮ್ಮ ಜನ ಸುಧಾರಿಸುವುದಿಲ್ಲ. ಪಾನ್, ಜರ್ದ ಉಗಿಯುವವರಿಂದ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ತೊಂದರೆ, ನಿಲ್ದಾಣದ ನೈರ್ಮಲ್ಯ ಹಾಳಾಗುತ್ತಿದೆ. ಇಂತಹವರನ್ನು ಹಿಡಿದು ದಂಡ ಹಾಕಬೇಕು

LEAVE A REPLY

Please enter your comment!
Please enter your name here

error: Content is protected !!