ಭಾರತದ ಗೇಮಿಂಗ್‌ ಮಾರುಕಟ್ಟೆ ಹೇಗೆ ಬೆಳೀತಿದೆ ಗೊತ್ತೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕವಾಗಿ ಭಾರತ ವೇಗವಾಗಿ ಮುನಗನುಗ್ಗುತ್ತಿದೆ ಎಂದು ಜಗತ್ತೇ ಹೇಳುತ್ತಿದೆ. ಇದಲ್ಲದೇ ತಂತ್ರಜ್ಞಾನ, ರಕ್ಷಣಾ ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿಯೂ ಭಾರತವು ವೇಗವಾಗಿ ಬೆಳೆಯುತ್ತಿದೆ. ಗೇಮಿಂಗ್‌ ಮಾರುಕಟ್ಟೆಯೂ ಅವುಗಳಲ್ಲೊಂದು. ಭಾರತವು ಮೊಬೈಲ್‌ ಅಪ್ಲಿಕೇಷನ್‌ ಗಳಲ್ಲಿ ವಿಷಯದಲ್ಲಿ ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ 2020-21ರ ನಡುವೆ ಭಾರತೀಯರು 24ಬಿಲಿಯನ್‌ ಗಳಷ್ಟು ಸಂಖ್ಯೆಯಲ್ಲಿ ಆಪ್‌ ಇನ್‌ಸ್ಟಾಲ್‌ ಮಾಡಿದ್ದಾರೆ.

ಭಾರತವು ಮೊಬೈಲ್‌ ಗೇಮಿಂಗ್‌ ಮಾರುಕಟ್ಟೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ios ಮತ್ತು ಪ್ಲೇಸ್ಟೋರ್‌ ಗಳಿಂದ ಅತಿ ಹೆಚ್ಚು ಮೊಬೈಲ್‌ ಗೇಮಿಂಗ್‌ ಅಪ್ಲಿಕೇಷನ್‌ಗಳು ಭಾರತದಲ್ಲಿ ಡೌನ್ಲೋಡ್‌ ಮಾಡಲ್ಪಟ್ಟಿವೆ. ಒಂದು ವರದಿಯ ಪ್ರಕಾರ ಭಾರತದಲ್ಲಿ 2021ರಲ್ಲಿ 4.8 ಬಿಲಿಯನ್‌ ಗಳಷ್ಟು ಸಂಖ್ಯೆಯಲ್ಲಿ ಗೇಮಿಂಗ್‌ ಅಪ್ಲಿಕೆಷನ್‌ ಗಳು ಡೌನ್ಲೋಡ್‌ ಮಾಡಲ್ಪಟ್ಟಿವೆ. ಅವುಗಳಲ್ಲಿ ಅತ್ಯಂತ ನೆಚ್ಚಿನ ಆಟವೆಂದರೆ ʼಲುಡೋ ಕಿಂಗ್‌ʼ. ಇದು ಇಂಡಿಯನ್ ಸ್ಟುಡಿಯೋ ಗೇಮೇಶನ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಉಚಿತ ಆಟವಾಗಿದೆ. ಇದು ವಾಸ್ತವವಾಗಿ ಪ್ರಾಚೀನ ಭಾರತೀಯ ಆಟವಾದ ಪಚಿಸಿಯನ್ನು ಆಧರಿಸಿದೆ.

ಆಸಕ್ತಿಕರ ಅಂಶವೇನೆಂದರೆ ಭಾರತದಲ್ಲಿ ಬಳಕೆಯಾಗುವ ಗೇಮಿಂಗ್‌ 1000 ಅಪ್ಲಿಕೇಷನ್‌ ಗಳ ಪಟ್ಟಿಯಲ್ಲಿ 7.6 ಶೇಕಡಾದಷ್ಟು ಗೇಮ್‌ ಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದವುಗಳಾಗಿವೆ. ಕೋವಿಡ್‌ ನಂತರದಲ್ಲಿ ಭಾರತೀಯ ಗೇಮರ್ಸ್‌ ಗಳ ಹುಮ್ಮಸ್ಸು ಅಷ್ಟೇನೂ ಕಡಿಮೆಯಾಗಿಲ್ಲ ಎನ್ನಲಾಗಿದೆ. ಹೀಗೆ ಭಾರತದ ಗೇಮಿಂಗ್‌ ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!