ಸೆಖೆಯಿಂದ ತಪ್ಪಿಸಿಕೊಳ್ಳೋಕೆ ಜನ ಏನೆಲ್ಲಾ ಉಪಾಯ ಹುಡುಕುತ್ತಾರೆ. ಬಟ್ಟೆಯೊಳಗೆ ಫ್ಯಾನ್ ಇಟ್ಟುಕೊಳ್ಳುತ್ತಾರೆ, ಹಣೆಮೇಲೆ ಹಾಗೂ ಕುತ್ತಿಗೆಗೆ ತಣ್ಣೀರು ಬಟ್ಟೆ ಸುತ್ತಿಕೊಳ್ಳುತ್ತಾರೆ ಹೇಗೆ ಹತ್ತು ಹಲವು ಉಪಾಯಗಳಿವೆ.
ಆದರೆ ಬಿಸಿಲಿಗೆ ಕೆಲವರು ಹೊರಹೋಗುವಾಗ ತಮ್ಮ ಪಾಕೆಟ್‌ಗಳಲ್ಲಿ ಈರುಳ್ಳಿಯನ್ನು ತುಂಬಿಕೊಂಡು ಹೋಗುತ್ತಾರೆ. ಇದರಿಂದ ಉಷ್ಣತೆ ಅಷ್ಟೊಂದು ಬಾಧಿಸುವುದಿಲ್ಲ ಎಂಬ ನಂಬಿಕೆ ಇದೆಯಂತೆ. ಇದು ಆಶ್ಚರ್ಯವನ್ನುಂಟು ಮಾಡುತ್ತಿದ್ದರೂ ಸತ್ಯ.
ಅಧಿಕ ಶಾಖವಿರುವ ಸಮಯದಲ್ಲಿ ಜೇಬಿನಲ್ಲಿ ಈರುಳ್ಳಿ ಇರಿಸಿಕೊಳ್ಳುವುದು ಅಧಿಕ ತಾಪದಿಂದ ರಕ್ಷಿಸುತ್ತದೆ ಎಂದಾಗಿದೆ. ಆದರೆ ಇದನ್ನು ಸಮರ್ಥಿಸಲು ಯಾವುದೇ ವೈಜ್ಞಾನಿಕ ದಾಖಲೆಗಳಿಲ್ಲ.
ಈರುಳ್ಳಿಗಳು ನೈಸರ್ಗಿಕವಾಗಿ ತಂಪಾಗಿಸುವ ಗುಣಗಳನ್ನು ಹೊಂದಿವೆ, ಏಕೆಂದರೆ ಅವುಗಳು ಕ್ವೆರ್ಸೆಟಿನ್ ಮತ್ತು ಸಲ್ಫರ್‌ನಂತಹ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಬೆವರುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಆವಿಯಾಗುವಿಕೆಯ ಮೂಲಕ ಶಾಖದ ನಷ್ಟವನ್ನು ಉತ್ತೇಜಿಸುತ್ತದೆ, ಇದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.