ರಯಾನ್, ಸೂರ್ಯ ಅಬ್ಬರದ ಬ್ಯಾಟಿಂಗ್: ಲಖನೌ ಗೆಲುವಿಗೆ 216 ರನ್​ಗಳ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಂಖೆಡೆ ಸ್ಟೇಡಿಯಂನಲ್ಲಿ ಸೂರ್ಯಕುಮಾರ್ ಯಾದವ್ (54) ಹಾಗೂ ರಯಾನ್ ರಿಕಲ್ಟನ್ (58) ಅರ್ಧಶತಕ ಸಿಡಿಸಿದ್ದು, ಈ ಮೂಲಕ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ಗಳ ಬೃಹತ್ ಮೊತ್ತಗಳಿಸಿದೆ.

ರೋಹಿತ್ ಶರ್ಮಾ ಕೇವಲ 5 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ 12 ರನ್​ಗಳಿಸಿ ಗಾಯದಿಂದ ಚೇತರಿಸಿಕೊಂಡು ಬಂದಿರುವ ಮಯಾಂಕ್ ಯಾದವ್​ಗೆ ವಿಕೆಟ್ ಒಪ್ಪಿಸಿದರು.

2ನೇ ವಿಕೆಟ್​ಗೆ ಜೊತೆಯಾದ ವಿಲ್ ಜಾಕ್ಸ್ ಹಾಗೂ ರಿಕಲ್ಟನ್​ 55 ರನ್​​ಗಳ ಜೊತೆಯಾಟ ನೀಡಿದರು. ರಿಕಲ್ಟನ್ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​ಗಳ ಸಹಿತ 58 ರನ್​ಗಳಿಸಿದರು. ವಿಲ್ ಜಾಕ್ಸ್ 21 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ 29 ರನ್ಗೆ ಔಟ್ ಆದರೆ, ತಿಲಕ್ ವರ್ಮಾ ಕೇವಲ 6 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಹಾರ್ದಿಕ್ ಪಾಂಡ್ಯ ಮಯಾಂಕ್ ಯಾದವ್​ ಬೌಲಿಂಗ್​​ನಲ್ಲಿ ಕೇವಲ 5 ರನ್​ಗಳಿಸಿ ಔಟ್ ಆದರು.

ಅದ್ಭುತ ಫಾರ್ಮ್​​ನಲ್ಲಿರುವ ಸೂರ್ಯಕುಮಾರ್ ಯಾದವ್​ ಲಖನೌ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಿದರು. ಅವರು 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ಗಳ ಸಹಿತ 54 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ನಮನ್ ಧೀರ್ 11 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ25 ರನ್ ಹಾಗೂ ಕಾರ್ಬಿನ್ ಬೌಷ್ 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್​ಗಳಸಿಇ ತಂಡದ ಮೊತ್ತವನ್ನು 200ರ ಗಡಿ ದಾಟಲು ನೆರವಾದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!