ಪಾಕಿಸ್ತಾನದಲ್ಲಿ ʼಮನಮೋಹನ್‌ ಸಿಂಗ್‌ ಶಾಲೆʼ ಇದರ ಹಿನ್ನೆಲೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೇಶದ ಅತ್ಯಂತ ಮೇಧಾವಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ, ಉದಾರೀಕರಣದ ಹರಿಕಾರ ಎಂಬ ಖ್ಯಾತಿ ಪಡೆದಿದ್ದ ಡಾ.ಮನಮೋಹನ್ ಸಿಂಗ್ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಇವರು 1932, ಸೆಪ್ಟೆಂಬರ್ 26 ರಂದು ಜನಿಸಿದ್ದರು. ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್​​ನ ಗಾವ್ ಎಂಬ ಹಳ್ಳಿ ಇವರ ಮೂಲ. ತಂದೆ ಗುರುಮುಖ್ ಸಿಂಗ್ ಮತ್ತು ತಾಯಿ ಅಮೃತ್ ಕೌರ್. ಬಾಲ್ಯದಲ್ಲಿರುವಾಗಲೇ ಸಿಂಗ್ ತಮ್ಮ ತಾಯಿಯನ್ನು ಕಳೆದುಕೊಂಡರು. ಹೀಗಾಗಿ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ದೇಶ ವಿಭಜನೆಯ ಬಳಿಕ ಮನಮೋಹನ್ ಸಿಂಗ್ ಕುಟುಂಬಕ್ಕೆ ಅಮೃತಸರಕ್ಕೆ ವಲಸೆ ಬಂದಿತು.

ವಿಶೇಷ ಅಂದತೆ ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ಮನಮೋಹನ್ ಸಿಂಗ್ ಹೆಸರಲ್ಲಿ ಶಾಲೆಯೊಂದು ಇದೆ. ಸಿಂಗ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಪಡೆದುಕೊಂಡಿದ್ದರು. ಹೀಗಾಗಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಹುಟ್ಟೂರಲ್ಲಿ ಸಂಭ್ರಮದ ಮನೆ ಮಾಡಿತ್ತು. ಅಲ್ಲಿನ ಪಂಜಾಬ್ ಪ್ರಾಂತ್ಯದ ಸರ್ಕಾರ 2007ರಲ್ಲಿ ಗೌರವಾರ್ಥವಾಗಿ ಗಹ್ ಗ್ರಾಮದಲ್ಲಿರುವ ಬಾಲಕರ ಶಾಲೆಗೆಗೆ ಮನಮೋಹನ್ ಸಿಂಗ್ ಬಾಲಕರ ಶಾಲೆ ಎಂದು ನಾಮಕರಣ ಮಾಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!