ಸ್ಕಿಪ್ಪಿಂಗ್‌ ಮಾಡೋದ್ರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ದೇಹದ ವ್ಯಾಯಾಮ ತುಂಬಾನೆ ಅವಶ್ಯಕ. ದೇಹದ ಆರೋಗ್ಯದ ಜೊತೆ ಜೊತೆಗೆ ಮಾನಸಿಕ ಆರೋಗ್ಯವು ಅಷ್ಟೇ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಅಂದಮೇಲೆ ಪ್ರತಿನಿತ್ಯ ಬೆಳಗೆದ್ದು ವ್ಯಾಯಾಮ ಮಾಡುವುದು ನಮಗೆ ಒಳಿತಲ್ಲವೇ..

ಕೆಲವೊಮ್ಮೆ ದೈಹಿಕ ವ್ಯಾಯಾಮ ಮಾಡಲು ಸಮಯ ಸಿಗದಿರಬಹುದು ಅಥವಾ ಆಸಕ್ತಿ ಇಲ್ಲದಿರಬಹುದು. ಅಂತಹ ಸಮಯದಲ್ಲಿ ಸ್ಕಿಪ್ಪಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ಕಿಪ್ಪಿಂಗ್‌ ಮಾಡೋದ್ರಿಂದ ಏನೆಲ್ಲಾ ಲಾಭಗಳಿವೆ ಅಂತ ಗೊತ್ತಾದ್ರೆ ನೀವು ಇಂದಿನಿಂದ ಕರಗತ ಮಾಡಿಕೊಳ್ತೀರಾ.

ಸ್ಕಿಪ್ಪಿಂಗ್‌ ಮಾಡುವುದರಿಂದ ಆಗುವ ಲಾಭಗಳು :

ಶ್ವಾಸಕೋಶ ಆರೋಗ್ಯ:

ಸ್ಕಿಪ್ಪಿಂಗ್‌ ಮಾಡಿದ ನಂತರ ಉಸಿರಾಟ ವೇಗವಾಗುತ್ತದೆ. ಇದರಿಂದ ಶ್ವಾಸಕೋಶಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ:

ಅಧಿಕ ತೂಕ ಹೊಂದಿರುವವರಿಗೆ ಸ್ಕಿಪ್ಪಿಂಗ್ ತುಂಬಾ ಉಪಯುಕ್ತ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡಿದರೆ ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಸ್ಕಿಪ್ಪಿಂಗ್ ಅಭ್ಯಾಸ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಹೃದಯದ ಆರೋಗ್ಯ:

ಸ್ಕಿಪ್ಪಿಂಗ್ ಮಾಡುವುದರಿಂದ ಹೃದಯ ಬಡಿತ ಹೆಚ್ಚಿಸುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ಬಹುತೇಕ ಹೃದಯದ ಸಮಸ್ಯೆಗಳು ಕಡಿಮೆಯಾಗುತ್ತವೆ.

ಮೆದುಳು ಕ್ರಿಯಾಶೀಲವಾಗುತ್ತದೆ:

ಸ್ಕಿಪ್ಪಿಂಗ್, ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರತಿದಿನ ತಪ್ಪದೆ ಸ್ಕಿಪ್ಪಿಂಗ್‌ ಮಾಡಿದರೆ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ.

ದೇಹದ ಮೂಳೆ ಆರೋಗ್ಯ ಕಾಪಾಡಲು:

ದೇಹದ ಮೂಳೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರಿಂದ ಮಣಿಗಂಟುಗಳಿಗೆ ಗಾಯ ಮತ್ತು ಇತರ ಯಾವುದೇ ಗಾಯದ ಸಮಸ್ಯೆ ನಿವಾರಣೆಯಾಗಲಿದೆ.

ಒತ್ತಡ ನಿವಾರಣೆ:

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಕಿಪ್ಪಿಂಗ್ ಮಾಡುವುದರಿಂದ ಒತ್ತಡ ನಿವಾರಣೆಯಾಗಲಿದೆ. ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಸೂಚನೆ: ತೀವ್ರ ಆರೋಗ್ಯ ಸಮಸ್ಯೆ ಉಳ್ಳವರು ಸ್ಕಿಪ್ಪಿಂಗ್ ಅಭ್ಯಾಸ ಮಾಡಬಾರದು. ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!