BUDGET | ಸಚಿವರ ಕೈಯಲ್ಲಿರೋ ‘ಸೂಟ್ ಕೇಸ್’ ಕಥೆ‌ ನಿಮಗೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತೀ ಬಾರಿ ಸಚಿವರು ಬಜೆಟ್ ಮಂಡನೆ ಮಾಡುವ ಮುನ್ನ ಅವರ ಕೈಯಲ್ಲಿ ಸೂಟ್‌ಕೇಸ್ ಒಂದು ಇರುವುದನ್ನು ಕಂಡಿರುತ್ತೀರಿ, ಇದನ್ನು ಹಿಡಿದುಕೊಳ್ಳೋದು ಯಾಕೆ? ಇದರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..

ಬಜೆಟ್ ಪುಸ್ತಕ ಇರುವ ಸೂಟ್‌ಕೇಸ್‌ನ್ನು ಇಟ್ಟುಕೊಂಡು ಬರುವ ಪರಿಪಾಠ ಹಿಂದಿನಿಂದಲೂ ಇದೆ. ಇದಕ್ಕೆ ಬ್ರಿಟಿಷರ ಆಡಳಿತದ ನಂಟಿದೆ. ಆಗಿನ ಕಾಲದಿಂದಲೂ ಬಜೆಟ್ ದಾಖಲೆಗಳನ್ನು ಭದ್ರವಾದ ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಬರಲಾಗುತ್ತಿತ್ತು.

ಬ್ರಿಟನ್‌ನಲ್ಲಿ ಬಜೆಟ್ ಮಂಡನೆ ಮಾಡುವಾಗ ಗ್ಲ್ಯಾಡ್‌ಸ್ಟೋನ್ ಬಾಕ್ಸ್ ಎನ್ನುವ ಬ್ರೀಫ್‌ಕೇಸ್‌ನಂಥ ಪೆಟ್ಟಿಗೆ ಬಳಸಲಾಗುತ್ತಿತ್ತು, ಭಾರತದಲ್ಲಿಯೂ ಇಂಥದ್ದೇ ಪೆಟ್ಟಿಗೆ ಬಳಸಲಾಗುತ್ತದೆ.

1860 ರಲ್ಲಿ ಬ್ರಿಟಿಷ್ ಬಜೆಟ್ ಮುಖ್ಯಸ್ಥ ವಿಲಿಯಮ್ ಗ್ಲಾಡ್‌ಸ್ಟೋನ್ ಬಜೆಟ್ ಮಂಡಿಸುವಾಗ ಕೈಯಲ್ಲಿ ಕೆಂಪುಬಣ್ಣದ ಸೂಟ್‌ಕೇಸ್ ತರುತ್ತಿತ್ತು. ಅದನ್ನೇ ಗ್ಲಾಡ್‌ಸ್ಟೋನ್ ಬಾಕ್ಸ್ ಎಂದು ಈಗಲೂ ಹೇಳಲಾಗುತ್ತದೆ.

ಗ್ಲಾಡ್‌ಸ್ಟೋನ್ ಸುದೀರ್ಘ ಭಾಷಣ ಮಾಡುತ್ತಿದ್ದ ಕಾರಣ, ಸೂಟ್‌ಕೇಸ್ ತುಂಬಾ ಕಾಗದಗಳನ್ನು ತರುತ್ತಿದ್ದರು.ಗ್ಲಾಡ್‌ಸ್ಟೋನ್ ನಿಧನಾನಂತರವೂ ಅವರ ಸೂಟ್‌ಕೇಸ್‌ನ್ನೇ ಬಳಕೆ ಮಾಡಲಾಗುತ್ತಿತ್ತು, ಅದೇ ಮುಂದುವರಿದು ಬಜೆಟ್‌ನಲ್ಲಿ ಸೂಟ್‌ಕೇಸ್ ಕಾಣಿಸುತ್ತದೆ.

2019ರಲ್ಲಿ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಅವರು ಸೂಟ್‌ಕೇಸ್ ಬದಲು ಲೆಡ್ಜರ್‌ನಲ್ಲಿ ಬಜೆಟ್ ಕಾಪಿ ತಂದಿದ್ದರು. 2021ರಲ್ಲಿ ಎಲ್ಲವೂ ಡಿಜಿಟಲ್ ಆಗಿ ಟ್ಯಾಬ್ಲೆಟ್‌ಗೆ ಬದಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!