ನಿಮಗೆ ಗೊತ್ತಾ, ಈ ಗಣಪನ ಮೇಲಿದೆ ಬರೋಬ್ಬರಿ 400 ಕೋಟಿ ರೂಪಾಯಿಗಳ ವಿಮೆ!

ಹೊಸದಿಗಂತ ವರದಿ, ಮಂಗಳೂರು:

ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ ಕೂಡ ಒಂದು.

ಈ ಬಾರಿಯೂ ಜಿಎಸ್‌ಬಿ ಸೇವಾ ಮಂಡಲದ ಗಣೇಶ ವಿಶ್ವದ ಶ್ರೀಮಂತ ಗಣಪ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ಜಿಎಸ್‌ಬಿ ಸೇವಾ ಮಂಡಲದ ಗಣಪತಿಗೆ ವಿಶೇಷ ಗೌರವ. ಬಹುಮುಖ್ಯ, ಪ್ರಸಿದ್ಧ, ಜನಪ್ರಿಯವಾಗಿರುವ ಗಣಪತಿಯೂ ಹೌದು.

ಜಿಎಸ್‌ಬಿ ಸೇವಾ ಮಂಡಲ ಎಂದು ಸರಳವಾಗಿ ಕರೆಯಿಸಿಕೊಳ್ಳುವ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಮಂಡಲದ ಗಣಪತಿಯನ್ನು ಮುಂಬಯಿಯ ಕಿಂಗ್ಸ್‌ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 7 ರಿಂದ 11 ರ ತನಕ ವಿಜೃಂಭಣೆಯಿಂದ ಜರಗಿತು.

ಗಣೇಶೋತ್ಸವಕ್ಕೆ 400 ಕೋಟಿ ರೂಪಾಯಿ ವಿಮೆ!
ಮುಂಬಯಿ ಗಣೇಶ ಪೆಂಡಾಲ್‌ಗಳ ಪೈಕಿ ಕಿಂಗ್ಸ್‌ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲ ಗಣೇಶೋತ್ಸವ ಪ್ರತಿ ವರ್ಷವೂ ಅದ್ದೂರಿ, ವಿಜೃಂಭಣೆಯ ಕಾರಣಕ್ಕೆ ಗಮನಸೆಳೆಯುವಂಥದ್ದು. ಇದೇ ಕಾರಣಕ್ಕೆ ಈ ಗಣೇಶೋತ್ಸವ ಪೆಂಡಾಲ್‌ ದೊಡ್ಡ ಮೊತ್ತದ ವಿಮೆ ರಕ್ಷಣೆಯನ್ನೂ ಪಡೆಯುತ್ತಿದೆ. ಈ ಬಾರಿ ದಾಖಲೆಯ 400.58 ಕೋಟಿ ರೂಪಾಯಿ ವಿಮೆ ಮಾಡಿಸಿಕೊಂಡು ಸುದ್ದಿಯಾಗಿದೆ.

ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ.

ಈ ವಿಮೆಯಲ್ಲಿ ವೈಯಕ್ತಿಕ ಅಪಘಾತ ರಕ್ಷಣೆ, ಚಿನ್ನ ಮತ್ತು ಬೆಳ್ಳಿ ಆಭರಣಗಳಿಗೆ, ಬೆಂಕಿ ಅನಾಹು ಸೇರಿ ಎಲ್ಲ ಅನಾಹುತಗಳ ವಿರುದ್ಧ ಮತ್ತು ಸಾರ್ವಜನಿಕ ಬಾಧ್ಯತೆಯ ವಿಮಾ ರಕ್ಷಣೆ ಒಳಗೊಂಡಿದೆ. ಜಿಎಸ್‌ಬಿ ಸೇವಾ ಮಂಡಲವು 2022ರಲ್ಲಿ 316.40 ಕೋಟಿ ರೂಪಾಯಿ, 2023ರಲ್ಲಿ 360.40 ಕೋಟಿ ರೂಪಾಯಿ ವಿಮೆ ಮಾಡಿಸಿತ್ತು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!