DO YOU KNOW ? | ನಿಮ್ಮ ನಿದ್ದೆಗೂ ಹೃದಯಕ್ಕೂ ಇದೆಯಂತೆ ಸಂಬಂಧ! ಹಾಗಿದ್ರೆ ಬೆಸ್ಟ್ ‘ಸ್ಲೀಪ್ ಗೋಲ್ಡನ್ ಅವರ್’ ಯಾವುದು?

ನಿದ್ದೆ ಅನ್ನೋದು ಮನುಷ್ಯನ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಅದೇ ರೀತಿ ಸರಿಯಾಗಿ ನಿದ್ರೆ ಮಾಡದಿದ್ದರೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ದಿನಕ್ಕೆ ಎಷ್ಟು ನಿದ್ರೆ ಬೇಕು ಎಂಬುದು ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿಸಿರುತ್ತದೆ.

ಇತ್ತೀಚೆಗೆ ಹೃದಯಾಘಾತದ ಸಂಖ್ಯೆಯೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹೃದಯಾಘಾತ ಸಂಭವಿಸುತ್ತಿದೆ. ಅದಕ್ಕೆ ಕಾರಣ ಸರಿಯಾದ ಟೈಮ್ ಗೆ ನಿದ್ದೆ ಮಾಡದೆ ಇರೋದು. ಇದಕ್ಕಾಗಿಯೇ ಯುರೋಪಿಯನ್‌ ಹಾರ್ಟ್‌ ಜರ್ನಲ್‌ ಅಧ್ಯಯನವನ್ನು ನಡೆಸಿದ್ದು, ಯಾವ ಟೈಮಲ್ಲಿ ನಿದ್ರೆ ಮಾಡಿದ್ರೆ ಹೃದಯ ಸಮಸ್ಯೆ ಕಡಿಮೆ ಎಂದು ಕಂಡುಕೊಂಡಿದೆ.

ಅಧ್ಯಯನದ ಪ್ರಕಾರ ಕೆಲವೊಂದು ಸಮಯಗಳು ಬಹಳ ಮೌಲ್ಯಯುತವಾಗಿರುತ್ತದೆ. ಈ ಸಂದರ್ಭದಲ್ಲಿ ನಿದ್ರೆ ಮಾಡಿದ್ರೆ ಹೃದ್ರೋಗ ಮತ್ತು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಎಂದು ವರದಿಯಾಗಿದೆ.

88,000+ ಜನರ ನಿದ್ರೆಯ ಮಾದರಿಗಳ ವಿಶ್ಲೇಷಣೆಯನ್ನು ಪರಿಶೀಲಿಸಿ ತಯಾರಿಸಲಾದ ವರದಿಯಲ್ಲಿ, ‘ಸ್ಲೀಪ್ ಗೋಲ್ಡನ್ ಅವರ್’ ಅಂದರೆ ರಾತ್ರಿ 10-11ರ ನಡುವೆ ಸಮಯದಲ್ಲಿ ಮಲಗುವವರಿಗೆ ಹೃದಯದ ಅನಾರೋಗ್ಯ ಕಡಿಮೆ ಎಂದು ಕಂಡುಬಂದಿದೆ. 10 ಗಂಟೆಯ ಮೊದಲು ಮಲಗುವವರಿಗೆ ಹೃದಯ ಸಮಸ್ಯೆಗಳ ಅಪಾಯ 24% ಹೆಚ್ಚು ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!