Friday, March 24, 2023

Latest Posts

AMAZING FACTS | ಪುರುಷರ ಬಗ್ಗೆ ಈ ಇಂಟ್ರೆಸ್ಟಿಂಗ್ ವಿಷಯಗಳು ನಿಮಗೆ ಗೊತ್ತಿತ್ತಾ?

ಮಹಿಳೆಯರದ್ದಷ್ಟೇ ಅಲ್ಲ, ಪುರುಷರ ಮನಸ್ಸನ್ನೂ ಅರ್ಥಮಾಡಿಕೊಳ್ಳೋದು ಸವಾಲಿನ ಕೆಲಸವೇ ಸರಿ!
ಪುರುಷರ ಬಗ್ಗೆ ಇಂಟ್ರೆಸ್ಟಿಂಗ್ ಎನಿಸುವ ಸಾಕಷ್ಟು ವಿಷಯಗಳಿವೆ, ಈ ಬಗ್ಗೆ ನಿಮಗೆ ಗೊತ್ತೂ ಇರಬಹುದು, ಗೊತ್ತಿಲ್ಲದೆಯೂ ಇರಬಹುದು.. ಇಂಟ್ರೆಸ್ಟಿಂಗ್ ವಿಷಯಗಳು ಹೀಗಿವೆ ನೋಡಿ..

  1. ಪುರುಷರಿಗೆ ಮಹಿಳೆಯರಿಗಿಂತ ದಪ್ಪವಾದ ಕೂದಲು ಇರುತ್ತದೆ, ನೋಡೋಕೂ ಗಾಢ ಬಣ್ಣ ಇರುತ್ತದೆ.
  2. ಪುರುಷರ ಚರ್ಮ ಗಟ್ಟಿ, ಅದಕ್ಕೆ ಅವರು ಒಂದೇ ಸ್ಕಿನ್ ಪ್ರಾಡಕ್ಟ್‌ನ್ನು ಮಾಯಿಶ್ಚರೈಸರ್ ಆಗಿ, ಸನ್‌ಸ್ಕ್ರೀನ್ ಆಗಿ, ಡೈಲಿ ಕ್ರೀಂ ಆಗಿ ಬಳಸಿದರೂ ಏನೂ ಆಗೋದಿಲ್ಲ.
  3. ಪುರುಷರಿಗೆ ಮಹಿಳೆಯರಿಂದ ದೊಡ್ಡ ಹಲ್ಲು ಇರುತ್ತದೆ, ಆದ್ರೂ ಉದ್ದ ಹಲ್ಲಿರೋ ಹೆಣ್ಮಕ್ಕಳನ್ನು ಆಡ್ಕೋಳೋದು ಯಾಕೆ??
  4. ಪುರುಷರಿಗೆ ದೊಡ್ಡ ಜಾ ಲೈನ್, ಕೆನ್ನೆ ಹಾಗೂ ಐಬ್ರೋ ಇರುತ್ತದೆ.
  5. ಸರಾಸರಿ ಮಹಿಳೆಯರಿಗೆ ಕಂಪೇರ್ ಮಾಡಿದ್ರೆ ಪುರುಷರೇ ಗೊರಕೆ ಹೊಡೆಯೋದ್ರಲ್ಲಿ ಎತ್ತಿದ ಕೈ, ಪುರುಷರನ್ನು ಮೀರಿಸೋ ಹೆಣ್ಮಕ್ಕಳೂ ಇಲ್ಲ ಅಂತೇನಿಲ್ಲ, ಆದ್ರೂ…
  6. ಭಯ, ಭೀತಿ, ಬೆದರಿಕೆಗೆ ಗಂಡಸರು ಬಗ್ಗೋದಿಲ್ಲ, ಹೆಂಗಸರಿಗೆ ಸಾಮಾನ್ಯವಾಗಿ ಇವು ಭಯ ತರಿಸುವ ವಿಷಯಗಳೇ!
  7. ಗಂಡುಮಕ್ಕಳೂ ಸ್ತನಪಾನ ಮಾಡಿಸಬಹುದಂತೆ! ಹೌದು, ಗರ್ಭದೊಳಗೆ ಮಗು ಗಂಡೋ ಅಥವಾ ಹೆಣ್ಣೋ ಎಂದು ನಿರ್ಧಾರ ಆಗೋಕೂ ಮೊದಲೇ ನಿಪ್ಪಲ್‌ಗಳು ಹುಟ್ಟಿರುತ್ತವೆ. ಮೆಮರಿ ಗ್ಲಾಂಡ್ ಕೂಡ ಇರುತ್ತದೆ. ಹಾಗಾಗಿ ಗಂಡಸರೂ ಸ್ತನಪಾನ ಮಾಡಿಸಬಹುದು, ಆದರೆ ಈ ರೀತಿ ಆಗೋದು ಆರೋಗ್ಯ ಕೆಟ್ಟಾಗ ಮಾತ್ರ !
  8. ಮಹಿಳೆಯರ ಡಯಟ್‌ನಿಂದ ಅವರ ಫರ್ಟಿಲಿಟಿಗೆ ಏನೂ ಸಮಸ್ಯೆ ಆಗೋದಿಲ್ಲ, ಆದರೆ ಪುರುಷರ ಡಯಟರಿ ಬದಲಾವಣೆಗಳು ಸ್ಪರ್ಮ್ ಕೌಂಟ್‌ನಲ್ಲಿ ಭಾರೀ ಬದಲಾವಣೆ ಮಾಡಿಸುತ್ತವಂತೆ!
  9. ಪುರುಷರಿಗೆ ಮಹಿಳೆಯರಷ್ಟು ಚಳಿ ಆಗೋದಿಲ್ಲ, ಅದಕ್ಕೆ ಅಲ್ವಾ ಸಿನಿಮಾದಲ್ಲಿ ಹೀರೋ ಟಕ್ ಅಂತ ಕೋಟ್ ಬಿಚ್ಚಿ ಕೊಡೋದು?
  10. ದೈಹಿಕವಾದ ನೋವನ್ನು ತಡೆದುಕೊಳ್ಳೋದು ಗಂಡಸರಿಗೆ ಕಷ್ಟವಂತೆ, ಅದಕ್ಕೆ ಪೀರಿಯಡ್ಸ್, ಡೆಲಿವರಿ ಪೇನ್ ಎಲ್ಲವೂ ಹೆಣ್ಣುಮಕ್ಕಳಿಗೆ ಇರಬಹುದು!

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!