ಮುಖದ ಚರ್ಮ ಸದಾ ಆರೋಗ್ಯಕರವಾಗಿ, ಹೊಳೆಯಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಅನೇಕರು ವಿಭಿನ್ನ ಕ್ರೀಮ್, ಫೇಸ್ ಪ್ಯಾಕ್‌ಗಳನ್ನು ಬಳಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಕಿನ್ ಕೇರ್ ಜಗತ್ತಿನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ವಿಟಮಿನ್ ಸಿ ಸೀರಮ್. ದಿನನಿತ್ಯದ ಚರ್ಮದ ಆರೈಕೆಗೆ ಇದನ್ನು ಸರಿಯಾಗಿ ಬಳಸಿದರೆ, ಚರ್ಮದ ಮೇಲೆ ಅದ್ಭುತವಾದ ಬದಲಾವಣೆಗಳನ್ನು ಕಾಣಬಹುದು.
- ವಿಟಮಿನ್ ಸಿ ಸೀರಮ್ ಚರ್ಮದ ಮಂಕುತನವನ್ನು ಕಡಿಮೆ ಮಾಡಿ, ಮುಖಕ್ಕೆ ತಾಜಾ ಮತ್ತು ಪ್ರಕಾಶಮಾನವಾದ ಲುಕ್ ನೀಡುತ್ತದೆ. ನಿರಂತರ ಬಳಕೆಯಿಂದ ಚರ್ಮದ ಟೋನ್ ಸಮನವಾಗುತ್ತದೆ.
- ಮುಖದ ಮೇಲೆ ಕಾಣಿಸುವ ಕಪ್ಪು ಕಲೆಗಳು, ಸನ್ ಟ್ಯಾನ್ ಮತ್ತು ಪಿಗ್ಮೆಂಟೇಶನ್ ಸಮಸ್ಯೆಗಳನ್ನು ನಿಧಾನವಾಗಿ ಕಡಿಮೆ ಮಾಡುವಲ್ಲಿ ಇದು ಸಹಕಾರಿ.
- ಚರ್ಮದ ಸಡಿಲತೆಯನ್ನು ಕಡಿಮೆ ಮಾಡಲು ವಿಟಮಿನ್ ಸಿ ಸಹಾಯ ಮಾಡುತ್ತದೆ. ಇದು ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
- ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಗ್ಗಿಸಲು ಇದು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ.
ವಿಟಮಿನ್ ಸಿ ಸೀರಮ್ ಬಳಸುವ ಸರಿಯಾದ ವಿಧಾನ
- ಮೊದಲು ಮೃದುವಾದ ಫೇಸ್ ವಾಶ್ ಬಳಸಿ ಮುಖವನ್ನು ಸ್ವಚ್ಛಗೊಳಿಸಿ. ಧೂಳು, ಎಣ್ಣೆ ಸಂಪೂರ್ಣವಾಗಿ ಹೋಗಬೇಕು.
- 2–3 ಹನಿ ವಿಟಮಿನ್ ಸಿ ಸೀರಮ್ ಸಾಕು. ಹೆಚ್ಚು ಹಾಕುವುದು ಅಗತ್ಯವಿಲ್ಲ.
- ಬೆರಳ ತುದಿಗಳಿಂದ ನಿಧಾನವಾಗಿ ಮುಖ ಮತ್ತು ಕುತ್ತಿಗೆಗೆ ಟ್ಯಾಪ್ ಮಾಡುವಂತೆ ಹಚ್ಚಿ. ಒರೆಸಬೇಡಿ.
- ಸೀರಮ್ ಶೋಷಣೆಯಾದ ನಂತರ ನಿಮ್ಮ ಚರ್ಮಕ್ಕೆ ಸೂಕ್ತವಾದ ಮಾಯಿಶ್ಚರೈಜರ್ ಹಚ್ಚಿ.
ಯಾವಾಗ ಬಳಸಬೇಕು?
- ಬೆಳಿಗ್ಗೆ ವಿಟಮಿನ್ ಸಿ ಸೀರಮ್ ಬಳಸುವುದರಿಂದ ಸೂರ್ಯನ ಕಿರಣಗಳಿಂದಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯವಾಗುತ್ತದೆ.
- ಬೆಳಿಗ್ಗೆ ಸೀರಮ್ ನಂತರ ಕಡ್ಡಾಯವಾಗಿ SPF ಇರುವ ಸನ್‌ಸ್ಕ್ರೀನ್ ಹಚ್ಚಬೇಕು.
- ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ. ಕಣ್ಣುಗಳ ಸುತ್ತ ಹಚ್ಚಬೇಡಿ. ಸೀರಮ್ ಅನ್ನು ಸದಾ ತಂಪಾದ, ಬೆಳಕಿಲ್ಲದ ಸ್ಥಳದಲ್ಲಿ ಇಡಿ.

