May 10, 2026
Sunday, May 10, 2026
spot_img

ಪ್ರಧಾನಿ ಉದ್ಘಾಟನೆ ಮಾಡಿರೋ ಆದಿಚುಂಚನಗಿರಿ ಭೈರವೈಕ್ಯ ಮಂದಿರದ ವಿಶೇಷತೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಶ್ರೀ ಗುರು ಭೈರವೈಕ್ಯ ಮಂದಿರವು ಈಗ ಭಕ್ತರ ಜೊತೆಗೆ ವಾಸ್ತುಪ್ರಿಯರ ಗಮನವನ್ನೂ ಸೆಳೆದಿದೆ. ದ್ರಾವಿಡ, ಚಾಲುಕ್ಯ, ಹೊಯ್ಸಳ ಹಾಗೂ ಗಂಗರ ಶೈಲಿಗಳ ಸಂಯೋಜನೆಯಲ್ಲಿ ರೂಪುಗೊಂಡಿರುವ ಈ ಭವ್ಯ ಮಂದಿರವು ಭಾರತೀಯ ಶಿಲ್ಪಕಲೆಯ ಅಪೂರ್ವ ನಿದರ್ಶನವಾಗಿ ಮೂಡಿಬಂದಿದೆ.

ಒಡಿಶಾದ ಪ್ರಸಿದ್ಧ ಸೂರ್ಯ ದೇವಾಲಯದ ವಿನ್ಯಾಸದಿಂದ ಪ್ರೇರಿತವಾಗಿ ಸುಮಾರು ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಈ ಮಂದಿರ ನಿರ್ಮಾಣಗೊಂಡಿದೆ. ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ವಾಸ್ತುಶಿಲ್ಪಿ ಶಂಕರ್ ಸ್ಥಪತಿ ಅವರ ಮೇಲ್ವಿಚಾರಣೆಯಲ್ಲಿ ಇದಕ್ಕೆ ಅಂತಿಮ ರೂಪ ನೀಡಲಾಗಿದೆ.

ಇದು ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ ಲಿಂಗೈಕ್ಯ ಸ್ಥಳದ ಸ್ಮಾರಕವಾಗಿದ್ದು, ಭಕ್ತರ ದರ್ಶನಕ್ಕಾಗಿ ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿದೆ.

ಇದನ್ನೂ ಓದಿ:

ಮಂದಿರದ ಗರ್ಭಗುಡಿಯಲ್ಲಿ ಸ್ವಾಮೀಜಿಯವರ ಅಮೃತಶಿಲೆಯ ಭವ್ಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರಿಗೆ ಗುರುಗಳು ಎದುರೇ ಕುಳಿತಿರುವ ಅನುಭವವನ್ನು ನೀಡುತ್ತದೆ. ಸಂಪೂರ್ಣ ಕಲ್ಲಿನ ಕೆತ್ತನೆಯೊಂದಿಗೆ ರೂಪುಗೊಂಡಿರುವ ಒಳಾಂಗಣದ ಪ್ರಶಾಂತ ವಾತಾವರಣ ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾಗಿದೆ.

ಒಟ್ಟಿನಲ್ಲಿ, ಈ ಮಂದಿರವು ಭಕ್ತಿ, ಪರಂಪರೆ ಮತ್ತು ವಾಸ್ತುಶಿಲ್ಪದ ವೈಭವವನ್ನು ಒಂದೇ ವೇದಿಕೆಯಲ್ಲಿ ತೋರಿಸುವ ಮಹತ್ವದ ಆಧ್ಯಾತ್ಮಿಕ ಕೇಂದ್ರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !