ಭಾರತದಲ್ಲಿ ಒಬ್ಬ ವ್ಯಕ್ತಿಯ ತಿಂಗಳ ಸರಾಸರಿ ಡೇಟಾ ಬಳಕೆ ಎಷ್ಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

4ಜಿ ಕಾಲ ಮುಗಿದು 5ಜಿ ಯುಗಕ್ಕೆ ದೇಶವು ವೇಗವಾಗಿ ತೆರೆದುಕೊಳ್ಳುತ್ತಿದೆ. ದೇಶದಲ್ಲಿ ಚಿಕ್ಕಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಂಟರ್ನೆಟ್‌ ಗೆ ಅಂಟಿಕೊಂಡು ಅಂತರ್ಜಾಲ ವ್ಯಸನಿಗಳಾಗಿಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವಪ್ರಸಿದ್ಧ ಮೊಬೈಲ್‌ ಕಂಪನಿ ನೋಕಿಯಾವು ವರದಿಯೊಂದನ್ನು ಹೊರಹಾಕಿದ್ದು ಇದರಲ್ಲಿ ಭಾರತೀಯರ ಪ್ರತಿತಿಂಗಳ ಸರಾಸರಿ ಡೇಟಾ ಬಳಕೆಯ ಪ್ರಮಾಣವನ್ನು ತೆರೆದಿಟ್ಟಿದೆ.

2022ರಲ್ಲಿ ಪ್ರತೀ ಭಾರತೀಯನ ಸರಾಸರಿ ಡೇಟಾ ಬಳಕೆಯು ತಿಂಗಳಿಗೆ 19.5GB ಯನ್ನು ತಲುಪಿದೆ. ಅರ್ಥಾತ್‌ ಸರಿಸುಮಾರು 6,600 ಹಾಡುಗಳನ್ನು ಕೇಳಬಹುದಾದಷ್ಟು ಡೇಟಾ ಬಳಕೆಗೆ ಸಮನಾಗಿರುತ್ತದೆ ಎಂದು ವರದಿ ತಿಳಿಸಿದೆ.

ನೋಕಿಯಾದ ವಾರ್ಷಿಕ ಮೊಬೈಲ್ ಬ್ರಾಡ್‌ಬ್ಯಾಂಡ್ ಇಂಡೆಕ್ಸ್ (MBiT) ವರದಿಯ ಪ್ರಕಾರ, ಭಾರತದಲ್ಲಿ ಮೊಬೈಲ್ ಡೇಟಾ ದಟ್ಟಣೆಯು ಕಳೆದ ಐದು ವರ್ಷಗಳಲ್ಲಿ 3.2 ಪಟ್ಟು ಹೆಚ್ಚಾಗಿದೆ, ಇದು ತಿಂಗಳಿಗೆ 14 ಎಕ್ಸಾಬೈಟ್‌ಗಳಿಗೆ ತಲುಪಿದೆ. ಪ್ರತಿ ತಿಂಗಳು ಪ್ಯಾನ್-ಇಂಡಿಯಾ ಮೊಬೈಲ್ ಡೇಟಾ ಬಳಕೆ 2018 ರಲ್ಲಿ 4.5 ಎಕ್ಸಾಬೈಟ್‌ಗಳಿಂದ 2022 ರಲ್ಲಿ 14.4 ಎಕ್ಸಾಬೈಟ್‌ಗಳಿಗೆ ಏರಿದೆ ಎಂದು ವರದಿ ಬಹಿರಂಗಪಡಿಸಿದೆ.

ಒಟ್ಟಾರೆಯಾಗಿ, 4G ಮತ್ತು 5G ಚಂದಾದಾರರು ಈಗ ದೇಶದ ಒಟ್ಟು ಮೊಬೈಲ್ ಡೇಟಾ ದಟ್ಟಣೆಯ ಸುಮಾರು 100 ಪ್ರತಿಶತವನ್ನು ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!