RD ಕಟ್ಟೋದು ಮಿಸ್ ಆದ್ರೆ ಏನೆಲ್ಲಾ ತೊಂದ್ರೆ ಇದೆ ಗೊತ್ತಾ?

ಮರುಕಳಿಸುವ ಠೇವಣಿ (RD) ಒಂದು ಜನಪ್ರಿಯ ಉಳಿತಾಯ ಯೋಜನೆ. ಇದರಲ್ಲಿ ನೀವು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡುತ್ತೇವೆ. ಈ ಉಳಿತಾಯ ಯೋಜನೆಯಲ್ಲಿ ನಾವು ಕಟ್ಟುವ ಕಂತು ತಪ್ಪಿದರೆ ಏನಾಗಬಹುದು ಎಂದು ತಿಳಿದುಕೊಳ್ಳೋಣ.

ಬಡ್ಡಿ ಕಡಿಮೆ
ಆರ್‌ಡಿ ಖಾತೆಯ ಬಡ್ಡಿಯನ್ನು ನಿಮ್ಮ ನಿಯಮಿತ ಠೇವಣಿಗಳ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. ಒಂದು ಕಂತು ತಪ್ಪಿದರೆ, ಆ ತಿಂಗಳ ಬಡ್ಡಿ ನಿಮಗೆ ಸಿಗುವುದಿಲ್ಲ. ಇದರಿಂದ ನಿಮ್ಮ ಒಟ್ಟು ಆದಾಯ ಕಡಿಮೆಯಾಗುತ್ತದೆ.

ಬ್ಯಾಂಕಿನೊಂದಿಗಿನ ಸಂಬಂಧಕ್ಕೆ ಹಾನಿ
ನೀವು ಆಗಾಗ ಕಂತು ತಪ್ಪಿಸಿದರೆ, ಬ್ಯಾಂಕಿನೊಂದಿಗಿನ ನಿಮ್ಮ ಸಂಬಂಧಕ್ಕೆ ಧಕ್ಕೆ ಬರಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ನೇರವಾಗಿ ಹಾನಿ ಮಾಡದಿದ್ದರೂ, ಭವಿಷ್ಯದಲ್ಲಿ ಸಾಲ ಅಥವಾ ಇತರ ಹಣಕಾಸು ಸೇವೆಗಳನ್ನು ಪಡೆಯಲು ತೊಂದರೆಯಾಗಬಹುದು.

ದಂಡ ತೆರಬೇಕಾಗಬಹುದು
ಕೆಲವು ಬ್ಯಾಂಕುಗಳು ಕಂತು ತಪ್ಪಿದರೆ ದಂಡ ವಿಧಿಸುತ್ತವೆ. ಇದು ನಿಮ್ಮ ಉಳಿತಾಯದ ಮೇಲೆ ಹೆಚ್ಚುವರಿ ಭಾರವನ್ನು ಉಂಟುಮಾಡುತ್ತದೆ.

ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸಬಾರದು ಎಂದಾದಲ್ಲಿ ನೀವು, ಬ್ಯಾಂಕಿನಿಂದ ಸ್ವಯಂಚಾಲಿತ ಪಾವತಿಯ ವ್ಯವಸ್ಥೆಯನ್ನು ಸೆಟ್ ಮಾಡಿ. ಇದರಿಂದ ನಿಮ್ಮ ಖಾತೆಯಿಂದ ಪ್ರತಿ ತಿಂಗಳು ಮೊತ್ತವು ತಾನಾಗಿಯೇ ಕಡಿತವಾಗುತ್ತದೆ. ಇದು ಕಂತು ತಪ್ಪುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!