ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ಈ ‘ಸೌಂಡ್ ಆಫ್ ಯುಐ’ ಈಗ ರಿವೀಲ್ ಆಗಿದೆ.
ಮೊದಲ ಬಾರಿಗೆ ಕನ್ನಡದ ಚಿತ್ರರಂಗದಿಂದ ಇಂಥದ್ದೊಂದು ದಾಖಲೆಗೆ ಮುನ್ನುಡಿ ಬರೆದಿದೆ ಯುಐ ಚಿತ್ರತಂಡ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಯುಐ ಮ್ಯೂಸಿಕ್ ಕಾರ್ಯಗಳು ನಡೆದಿರೋದ್ರ ಬಗ್ಗೆ ಸುದ್ದಿ ಕೇಳಿದ್ದ ನಿಮಗೆಲ್ಲಾ ಅದರ ಚಿತ್ರಣ ತೋರಿಸಲು ಮುಂದಾಗಿದೆ. ಜೊತೆಗೆ ಹಿತಕರ ಬಿಜಿಎಂ ಸೌಂಡ್‌ನ ಝಲಕ್ ಈಗ ರಿಲೀಸ್ ಮಾಡಲಾಗಿದೆ.
ಯುಐ ತಂಡ ಹಂಗೇರಿಯ ಕ್ಯಾಪಿಟಲ್ ಸಿಟಿ ಬುಡಾಪೆಸ್ಟ್‌ನಲ್ಲಿ ಹಲವು ದಿನಗಳು ಇದ್ದು ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ. ಇಲ್ಲಿ ‘ಯುಐ’ ಬಿಜಿಎಂ ಹಾಗೂ ಕೆಲವು ಹಾಡುಗಳನ್ನೂ ರೆಕಾರ್ಡಿಂಗ್ ಮಾಡಿಕೊಳ್ಳಲಾಗಿದೆ. ನೂರಾರು ವಾದ್ಯಗಳು ಒಮ್ಮೆಲೇ ಟ್ರೂನ್ ಆಗಿವೆ. ಆ ಬಿಜಿಎಂ ಸೌಂಡ್‌ನ ಝಲಕ್ ‘ಯುಐ’ ಸಿನಿಮಾದ ಹೈಲೈಟ್.
ಉಪೇಂದ್ರ ಬಹುವರ್ಷಗಳ ಬಳಿಕ ನಿರ್ದೇಶಿಸಿರುವ ಚಿತ್ರ ‘ಯುಐ’. ಲಹರಿ ಫಿಲ್ಮ್ಸ್ ಜೊತೆ ವೀನಸ್ ಎಂಟರ್‌ಪ್ರೈಸ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ. ‘ಯುಐ’ ಮೂಲಕ ಸ್ಯಾಂಡಲ್‌ವುಡ್ ಇನ್ನೊಮ್ಮೆ ಜಗತ್ತಿನಾದ್ಯಂತ ವಿಜಯಪತಾಕೆ ಹಾರಿಸುವ ನಿರೀಕ್ಷೆಯೂ ಇದೆ. ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಮೊದಲ ಬಾರಿಗೆ ನಟಿಸಿದ್ದಾರೆ. ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಸಿನಿಮಾ ಸೌಂಡ್ ಆಫ್ ಯುಐನಿಂದ ಸದ್ದು ಮಾಡುತ್ತಿದೆ.