ತಡೆಯೋಕಾಗದ ಹೊಟ್ಟೆ ನೋವಿನಿಂದ ಒದ್ದಾಡಿದ ಮಹಿಳೆ, ಹೊಟ್ಟೆಯೊಳಗೆ ಏನಿತ್ತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಪರೀತ ಹೊಟ್ಟೆನೋವಿನಿಂದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಮಹಿಳೆಯ ಸಿಟಿ ಸ್ಕ್ಯಾನ್‌ ನೋಡಿ ವೈದ್ಯರು ಬೆಚ್ಚಿಬಿದ್ದಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ನ ಮಹಿಳೆಗೆ ಈ ಹಿಂದೆ ಲಾತೂರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಆಗಿದ್ದು, ಈ ವೇಳೆ ಬಳಸಿದ ಬಟ್ಟೆಯೊಂದನ್ನು ಸಿಸೇರಿಯನ್ ಮಾಡಿದ ವೈದ್ಯರು ಹೊಟ್ಟೆಯೊಳಗೆ ಹಾಗೆಯೇ ಮರೆತು ಹೊಲಿಗೆ ಹಾಕಿದ್ದಾರೆ. ಇದರಿಂದ ಮಹಿಳೆ ತೀವ್ರ ಹೊಟ್ಟೆ ನೋವು ಉಂಟಾಗಿದೆ.

ಸಿಸೇರಿಯನ್ ಮಾಡಿ ನಾಲ್ಕು ತಿಂಗಳು ಕಳೆದರೂ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಿಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಎಷ್ಟೋ ಬಾರಿ ಔಷಧೋಪಚಾರ ಮಾಡಿದರೂ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ.

ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಸಿ-ಸೆಕ್ಷನ್ ಸಮಯದಲ್ಲಿ ವೈದ್ಯರು ರಕ್ತವನ್ನು ಸ್ವಚ್ಛಗೊಳಿಸಲು ಬಳಸಲಾದ ಬಟ್ಟೆಯನ್ನು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ತನಿಖೆ ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here