SHOCKING | ಒಂದೇ ದಿನ 23 ಹಲ್ಲುಗಳನ್ನು ಕಿತ್ತ ಡಾಕ್ಟರ್‌, ನೋವಿನಿಂದ ಒದ್ದಾಡಿ ಪ್ರಾಣಬಿಟ್ಟ ರೋಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಲ್ಲು ಹುಳುಕಾಗಿದೆ ಎಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ 23ಹಲ್ಲುಗಳನ್ನು ವೈದ್ಯರು ತೆಗೆದಿದ್ದು, ರಕ್ತಸ್ರಾವ ಹಾಗೂ ನೋವಿನಿಂದ ವ್ಯಕ್ತಿ ಮೃತಪಟ್ಟಿದ್ದಾರೆ.

ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿ ಹಲ್ಲಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ವ್ಯಕ್ತಿಗೆ ದಂತ ವೈದ್ಯರು ಹಲ್ಲು ತೆಗೆಸಿ ಹೊಸ ಹಲ್ಲು ಅಳವಡಿಸುವುದಾಗಿ ಹೇಳಿದ್ದರು. ಅದರಂತೆ ವೈದ್ಯರು ಒಂದೇ ದಿನ 23 ಹಲ್ಲು ಕಿತ್ತಿದ್ದಾರೆ. ಇದೀಗ ಹಲ್ಲು ಕಿತ್ತ 13 ದಿನಗಳ ಬಳಿಕ ವ್ಯಕ್ತಿ ಸಾವನ್ನಪ್ಪಿದ್ದು, ತೀವ್ರ ರಕ್ತಸ್ರಾವ ಹಾಗೂ ನೋವಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮೃತನ ಮಗಳು ಆರೋಪಿಸಿದ್ದಾಳೆ.

ಘಟನೆಯ ಕುರಿತು ಯುವತಿ ಸೆಪ್ಟೆಂಬರ್ 2 ರಂದು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಫೋಸ್ಟ್​​ ಎಲ್ಲೆಡೆ ವೈರಲ್​ ಆಗಿದೆ. “ನನ್ನ ತಂದೆ ಹುವಾಂಗ್ ಆಗಸ್ಟ್ 14 ರಂದು ಯೋಂಗ್‌ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ ದಂತ ಚಿಕಿತ್ಸೆಗೆ ಒಳಗಾಗಿದ್ದರು. ದಂತ ವೈದ್ಯರು ತಂದೆಯ 23 ಹಲ್ಲುಗಳನ್ನು ಹೊರತೆಗೆದು, ಆ ದಿನವೇ 12 ಹೊಸ ಹಲ್ಲುಗಳನ್ನು ಅಳವಡಿಸಿದರು. ಆದರೆ ಚಿಕಿತ್ಸೆಯ ನಂತರ, ತಂದೆ ತುಂಬಾ ನೋವಿನಿಂದ ಬಳಲುತ್ತಿದ್ದರು. ಇದೀಗ ಹದಿಮೂರು ದಿನಗಳ ನಂತರ ಅವರು ಹಠಾತ್ ಹೃದಯಾಘಾತದಿಂದ ನಿಧನರಾದರು.” ಎಂದು ಯುವತಿ ಹೇಳಿಕೊಂಡಿದ್ದಾಳೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!