ಆಲಿಯಾ-ರಣಬೀರ್ ಮದುವೆ ಎಲ್ಲಿ ನಡೆದಿದೆ ಗೊತ್ತಾ? ನೆಚ್ಚಿನ ಸ್ಥಳ ಎಂದು ಆಲಿಯಾ ಪೋಸ್ಟ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ನ ಲವ್ ಬರ್ಡ್ಸ್ ಆಲಿಯಾ ಭಟ್-ರಣಬೀರ್ ಕಪೂರ್ ಮದುವೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಇವರ ಮದುವೆ ಬಗ್ಗೆ ಆಲಿಯಾ ಕುತೂಹಲಕಾರಿ ವಿಚಾರವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದುವರೆಗೂ ಇವರ ಪ್ರೀತಿ, ಎಲ್ಲಿ, ಹೇಗಾಯ್ತು..? ಅಂತ ಕೆಲ ಕುತೂಹಲಕಾರಿ ವಿಚಾರಗಳು ಅಭಿಮಾನಿಗಳ ಮನಸಲ್ಲಿ ಕೊರೆಯುತ್ತಿದ್ದವು ಅದೆಲ್ಲದಕ್ಕೂ ಇಂದಿನ ಪೋಸ್ಟ್‌ನಲ್ಲಿ ಉತ್ತರ ಇದೆ.

ಈ ಮದುವೆ ಹಿಂದೆ ಕೆಲವು ಮರೆಯಲಾಗದ ನೆನಪುಗಳಿವೆ ಎಂದು ಫೋಟೋಗಳೊಂದಿಗೆ ಭಾವನಾತ್ಮಕ ಪೋಸ್ಟ್‌ ಮಾಡಿದ್ದಾರೆ ಆಲಿಯಾ.
”ಇಂದು ನಮ್ಮ ಮದುವೆ ನನ್ನ ನೆಚ್ಚಿನ ಸ್ಥಳದಲ್ಲಿ ನಡೆದಿದೆ. ಅಲ್ಲಿ ನಮ್ಮ 5 ವರ್ಷಗಳ ಪ್ರೀತಿಯ ಸವಿನೆನಪಿದೆ. ನಾವು ಕಾಲ ಕಳೆದ ಬಾಲ್ಕನಿಯಲ್ಲಿ ನಮ್ಮ ಮದುವೆ ನಡೆದಿದೆ ಎಂಬ ಸೀಕ್ರೆಟ್‌ ರಿವೀಲ್‌ ಮಾಡಿದ್ದಾರೆ. ಇಲ್ಲಿ ಪ್ರೀತಿ, ನಗು, ಮೌನ, ನಮ್ಮ ಕುಚೇಷ್ಟೆಗಳು, ವೈನ್ ಡಿಲೈಟ್ಸ್, ಚೈನೀಸ್ ಪಾಕಪದ್ಧತಿಗಳು ಹೀಗೆ ಹಲವು ನೆನಪುಗಳು ಇಲ್ಲಿವೆ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!