ಜಗತ್ತಿನ ಯಾವ ದೇಶ ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ನು ಕೆಲವೇ ಗಂಟೆಗಳಲ್ಲಿ 2023ನೇ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷವನ್ನು ಸ್ವಾಗತಿಸಲು ಪ್ರಪಂಚದಾದ್ಯಂತ ಜನರು ಸಿದ್ಧರಾಗಿದ್ದಾರೆ. ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಯನ್ನು ಆಚರಿಸಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ 2023 ನೇ ವರ್ಷವನ್ನು ಸ್ವಾಗತಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜಗತ್ತಿನ ದೇಶಗಳಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಹೊಸ ವರ್ಷದ ಆಚರಣೆಗಳು ಆರಂಭವಾಗುತ್ತವೆ. ಕೆಲವು ದೇಶಗಳಲ್ಲಿ 2023 ಮುಂಚಿತವಾಗಿ ಬರುತ್ತದೆ. ಭಾರತದ ಸಮಯಕ್ಕೆ ಹೋಲಿಸಿದರೆ, ಹಲವು ದೇಶಗಳ ಜನರು ಭಾರತಕ್ಕಿಂತ ಕೆಲವು ಗಂಟೆಗಳ ಮುಂಚಿತವಾಗಿ 2023 ನೇ ವರ್ಷವನ್ನು ಸ್ವಾಗತಿಸುತ್ತಾರೆ. ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಹೊಸ ವರ್ಷವನ್ನು ಮುಂಚಿತವಾಗಿ ಸ್ವಾಗತಿಸುವ ದೇಶಗಳಲ್ಲಿ ಸೇರಿವೆ. ಹೊಸ ವರ್ಷದ ಆಚರಣೆಗಳು ಮೊದಲು ಪೆಸಿಫಿಕ್ ದ್ವೀಪವಾದ ಟೊಂಗಾದಲ್ಲಿ ಪ್ರಾರಂಭವಾಗುತ್ತವೆ

ಡಿಸೆಂಬರ್ 31 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ಸಮೋವಾ, ಕ್ರಿಸ್‌ಮಸ್ ದ್ವೀಪ / ಕಿರಿಬಾಟಿಯ ಜನರು 2023 ರ ವರ್ಷವನ್ನು ಸ್ವಾಗತಿಸುತ್ತಾರೆ. ಏಷ್ಯಾದ ದೇಶಗಳಲ್ಲಿ, ಜಪಾನ್ ಮತ್ತು ದಕ್ಷಿಣ ಕೊರಿಯಾ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಭಾರತೀಯ ಕಾಲಮಾನದ ಪ್ರಕಾರ 2023 ರ ಡಿಸೆಂಬರ್ 31 ರಂದು ರಾತ್ರಿ 8.30 ಕ್ಕೆ ಅಲ್ಲಿನ ಜನ ಸ್ವಾಗತಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!