ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ (Keerthi Suresh) ಇತ್ತೀಚೆಗೆ ಯುವ ಉದ್ಯಮಿಯೊಬ್ಬರ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಇಬ್ಬರೂ ಒಂದೇ ಕಲರ್ ಬಟ್ಟೆ ಹಾಕುವುದರ ಜೊತೆಗೆ ತುಂಬಾ ಆತ್ಮೀಯವಾಗಿ ಫೋಟೋಗೆ ಪೋಸ್ ನೀಡಿದ್ದರು.
ಇದಾದ ಬಳಿಕ ಯುವ ಉದ್ಯಮಿಯನ್ನು ಕೀರ್ತಿ ಮದುವೆಯಾಗಲಿದ್ದಾರಾ ಎನ್ನುವ ಅನುಮಾನ ಮೂಡಿತ್ತು.ಇದೀಗ ನಟಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.
ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ, ಆತ ತನ್ನ ಸ್ನೇಹಿತನೆಂದು ಕೀರ್ತಿ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಸ್ನೇಹಿತರನ್ನು (Friendsಎಳೆತರಬೇಡಿ ಎಂದು ಮನವಿ ಮಾಡಿದ್ದಾರೆ. ಸ್ನೇಹಿತನ ಬರ್ತ್‌ಡೇ ಪಾರ್ಟಿಯಲ್ಲಿ ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಅಂದಹಾಗೆ ಆತನ ಹೆಸರು ಫರ್ಹಾನ್ ಬಿನ್ ಲೈತ್ (Farhan Bin Laith). ರಿಯಲ್ ಎಸ್ಟೇಟ್ ಉದ್ಯಮಿ. ರೆಸ್ಟೋರೆಂಟ್ ಒಡೆಯ.