ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಭಾಸ್ ಹಾಗೂ ಸಲ್ಮಾನ್ ಖಾನ್ ಎಲ್ಲಿ ಹೋದರೂ ಅವರಿಗೆ ಮೊದಲು ಎದುರಾಗೋ ಪ್ರಶ್ನೆ ಮದುವೆ ಯಾವಾಗ? ರಾಧೆಶ್ಯಾಮ್ ಪ್ರಮೋಷನ್ನಲ್ಲಿ ಪ್ರಭಾಸ್ಗೂ ಇದೇ ಪ್ರಶ್ನೆ ಎದುರಾಗಿದ್ದು, ಪ್ರಭಾಸ್ ಫನ್ನಿಯಾಗಿ ಉತ್ತರಿಸಿ ಕೈ ಚೆಲ್ಲಿದ್ದಾರೆ. ಲವ್ ವಿಷಯದಲ್ಲಿ ನನ್ನ ಊಹೆ, ಫ್ಯೂಚರ್ ಯಾವಾಗಲೂ ಸರಿ ಇರೋದಿಲ್ಲ. ಅದಕ್ಕೆ ಇನ್ನೂ ಮದುವೆಯಾಗಿಲ್ಲ ಎಂದು ಹೇಳಿ ನಕ್ಕಿದ್ದಾರೆ.
ಪ್ರೀತಿ ವಿಷಯದಲ್ಲಿ ನನ್ನ ಪ್ರೆಡಿಕ್ಷನ್ ಯಾವಾಗಲೂ ತಪ್ಪು ಎಂದು ಟ್ರೇಲರ್ನಲ್ಲಿ ಫೇಮಸ್ ಆದ ರಾಧೆ ಶ್ಯಾಮ್ ಡೈಲಾಗ್ ಹೇಳಿದ್ದಾರೆ. ರಾಧೆಶ್ಯಾಮ್ ಚಿತ್ರ ಮಾರ್ಚ್11ರಂದು ತೆರೆಕಾಣಲಿದ್ದು, ಮುಖ್ಯ ಭೂಮಿಕೆಯಲ್ಲಿ ಪೂಜಾಹೆಗ್ಡೆ ಹಾಗೂ ಪ್ರಭಾಸ್ ನಟಿಸಿದ್ದಾರೆ. ತಮಿಳು,ತೆಲುಗು,ಹಿಂದಿ,ಕನ್ನಡ,ಮಲಯಾಳಂ, ಜಪಾನ್ ಹಾಗೂ ಚೈನೀಸ್ ಭಾಷೆಯಲ್ಲಿ ರಾಧೆ ಶ್ಯಾಮ್ ರಿಲೀಸ್ ಆಗಲಿದೆ.