ನಾಳೆ ಭಾರತ VS ಶ್ರೀಲಂಕಾ ಮೊದಲ ಟೆಸ್ಟ್‌: ವಿರಾಟ್ ಕೊಹ್ಲಿ, ರಿಷಭ್ ಪಂತ್ ತಂಡಕ್ಕೆ ಕಮ್​ಬ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ ನಾಳೆಯಿಂದ (ಮಾರ್ಚ್‌ 4) ಆರಂಭಗೊಳ್ಳಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಟೆಸ್ಟ್‌ ಪಂದ್ಯವನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ ಟಿ 20 ಸರಣಿಯಲ್ಲಿ ಲಂಕನ್ನರನ್ನು ಬಗ್ಗುಬಡಿದು ಕ್ಲೀನ್​ಸ್ವೀಪ್ ಸಾಧನೆ ಮಾಡಿರುವ ರೋಹಿತ್‌ ಬಳಗ ಟೆಸ್ಟ್ ನಲ್ಲಿಯೂ ಪಾರಮ್ಯ ಮೆರೆಯಲು ಎದುರು ನೋಡುತ್ತಿದೆ. ಪೂರ್ಣಪ್ರಮಾಣದ ಟೆಸ್ಟ್‌ ನಾಯಕರಾಗಿ ರೋಹಿತ್‌ ಗೆ ಇದು ಮೊದಲ ಪಂದ್ಯವಾಗಿದ್ದು, ಆಟಗಾರರು ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ರಿಷಭ್ ಪಂತ್ ಟೆಸ್ಟ್‌ ನಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಮಾಜಿ ನಾಯಕ ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿರುವುದು ವಿಶೇಷ. ನಾಳೆ ಬೆಳಗ್ಗೆ 9:30 ಗಂಟೆಗೆ ಸ್ಟಾರ್ ಸ್ಫೋರ್ಟ್ಸ್​ ನೆಟ್​ವರ್ಕ್​ನಲ್ಲಿ ಪಂದ್ಯ ನೇರಪ್ರಸಾರವಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್‌ಗಿಲ್, ರಿಷಭ್ ಪಂತ್ (ವಿಕೆಟ್‌ಕೀಪರ್‌), ಕೆ.ಎಸ್ ಭರತ್ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಜಯಂತ್ ಯಾದವ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಸೌರಭ್ ಕುಮಾರ್ , ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್‌ಶಮಿ, ಜಸ್‌ಪ್ರೀತ್ ಬುಮ್ರಾ (ಉಪನಾಯಕ).

ಶ್ರೀಲಂಕಾ ಟೆಸ್ಟ್‌ತಂಡ: ದಿಮುತ್‌ ಕರುಣಾರತ್ನೆ (ನಾಯಕ), ಪತುಮ್‌ನಿಸಂಕ, ಲಾಹಿರು ತಿರಿಮನ್ನೆ, ಧನಂಜಯ ಡಿ’ಸಿಲ್ವಾ (ಉಪನಾಯಕ), ಕುಶಲ್‌ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ದಿನೇಶ್‌ಚಾಂದಿಮಾಲ್, ಚರಿತ್‌ಅಸಲಂಕ, ನಿರೋಷನ್‌ಡಿಕ್ವೆಲ್ಲ, ಚಮಿಕ ಕರುಣಾರತ್ನೆ, ರಮೇಶ್‌ಮೆಂಡಿಸ್‌, ಲಾಹಿರು ಕುಮಾರ, ಸುರಂಗ ಲಕ್ಮಲ್, ದುಷ್ಮಾಂತ ಚಾಮೀರ, ವಿಶ್ವ ಫರ್ನಾಂಡೊ, ಜೆಫ್ರಿ ವ್ಯಾಂಡರ್ಸೆ, ಪ್ರವೀಣ್‌ಜಯವಿಕ್ರಮ, ಲಸಿತ್‌ಎಂಬುಲ್ದೇನಿಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!