ದೀಪಾವಳಿಯು ಬೆಳಕಿನ ಹಬ್ಬವಾಗಿದೆ ಮತ್ತು ಬೆಳಕು ಕತ್ತಲೆಯನ್ನು ಹೋಗಲಾಡಿಸುವುದು. ಜ್ಞಾನವನ್ನು ಸಂಕೇತಿಸುವ ದೀಪಗಳನ್ನು ಬೆಳಗಿಸುವಾಗ, ಪ್ರತಿ ದೀಪವು ಎರಡು ಬತ್ತಿಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಇದಕ್ಕೊಂದು ವಿಶೇಷ ಕಾರಣವಿದೆ.
ದೇವರ ಮನೆಗೆ ದೀಪದ ಬೆಳಕೇ ಶೋಭೆ. ಸಾಮಾನ್ಯವಾಗಿ ಎರಡು ದೀಪಗಳನ್ನು ದೇವರ ಮುಂದೆ ಬೆಳಗಿಸಲಾಗುತ್ತದೆ. ಪ್ರತಿ ದೀಪಕ್ಕೂ ಎರಡು ಬತ್ತಿಯ ಕಾರಣ ಇಷ್ಟೇ ಎರಡು ದೀಪ ಅಥವಾ ಎರಡು ಬತ್ತಿ ಪತಿ ಪತ್ನಿಯ ಸ್ವರೂಪ.
ದೇವರ ಮುಂದೆ ಬೆಳಗೋ ಎರಡು ದೀಪಗಳು, ದೀಪದಲ್ಲಿ ಉರಿಯುವ ಎರಡು ಬತ್ತಿಗಳು ಕುಟುಂಬಕ್ಕಾಗಿ ತ್ಯಾಗ, ಸೇವೆಯನ್ನು ಪ್ರತಿನಿಧಿಸುತ್ತದೆ. ದೀಪದ ಬೆಳಕು ಅವರಿಬ್ಬರ ಪ್ರೀತಿಯ ಸಂಕೇತ. ಬೆಳಗುವ ದೀಪ ಹೇಗೆ ನೋಡಲು ಸುಂದರವೊ, ಹಾಗೆ ಪತಿ ಪತ್ನಿಯರ ಪ್ರೀತಿ ಬಾಂಧವ್ಯ ಕುಟುಂಬದ ಶ್ರೇಯಸ್ಸಿಗೆ ಕಾರಣ.