MOTIVATION | ನಿಮಗ್ಯಾಕೆ ಸಕ್ಸಸ್‌ ಸಿಗ್ತಿಲ್ಲ ಗೊತ್ತಾ? mental growth ಬಗ್ಗೆ ಮೊದಲು ತಿಳಿದುಕೊಳ್ಳಿ..

ಜೀವನದಲ್ಲಿ ನಾನು ನನ್ನ ಕೈಲಾದ ಎಲ್ಲ ಕೆಲಸಗಳನ್ನು ಮಾಡಿದರೂ ಯಾಕೋ ಸಕ್ಸಸ್‌ ನನ್ನ ಬಳಿ ಸುಳಿಯುತ್ತಿಲ್ಲ. ಯಾಕೆ ಅಂತ ಯೋಚ್ನೆ ಮಾಡ್ತಿದ್ದೀರಾ? ನಿಮ್ಮ ಮೆಂಟಾಲಿಟಿ ವಿಭಿನ್ನವಾಗಿದೆ, ನಿಮ್ಮ ಗ್ರೋತ್‌ ಡಿಪೆಂಡ್‌ ಆಗಿರೋದು ನಿಮ್ಮ ಆಟಿಟ್ಯೂಡ್‌ ಮೇಲೆ. ಮೆಂಟಲಿ ಗ್ರೋತ್‌ ಆಗೋದು ಹೇಗೆ?

ಯಾವಾಗಲೂ ಪಾಸಿಟಿವ್‌ ಥಿಂಕಿಂಗ್‌ ಮಾಡಿ. ಇದು ನಿಮ್ಮ ಆಂಕ್ಸೈಟಿ, ಡಿಪ್ರೆಷನ್‌ ಎಲ್ಲವನ್ನು ಹೋಗಲಾಡಿಸಿ ಹೊಸ ಆಲೋಚನೆ ನೀಡುತ್ತದೆ.

ಎಲ್ಲ ವಿಷಯಗಳಿಗೆ ಕೃತಜ್ಞರಾಗಿರಿ. ಬೆಳಗ್ಗೆ ಎದ್ದ ತಕ್ಷಣ ಕಾಫಿ ನೀಡುವ ಅಮ್ಮನಿಗೆ, ಸೇಫ್‌ ಹಾಗೂ ಆರೋಗ್ಯವಾಗಿರುವುದಕ್ಕೆ ದೇವರಿಗೆ, ನಿಮ್ಮ ಜೀವನದ ಪ್ರತಿ ಅವಕಾಶಕ್ಕೂ ಖುಷಿ ಇರಲಿ.

ನಿಮ್ಮ ಜೀವನ ಎಷ್ಟೊಂದು ಜನಕ್ಕೆ ಮಾದರಿ, ನೀವು ಇನ್ನೊಬ್ಬರ ರೋಲ್‌ ಮಾಡೆಲ್‌ ಆಗಿದ್ದೀರಿ. ನಿಮ್ಮ ರೀತಿ ಬಾಳುವುದು ಇನ್ನೊಬ್ಬರ ಕನಸು, ಹಾಗಾಗಿ ನಿಮಗಿಂತ ಮೇಲಿರು ಇನ್ಯಾರನ್ನೋ ನೋಡಿ ಹೊಟ್ಟೆ ಉರಿದುಕೊಳ್ಳಬೇಡಿ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಸ್ಯೆ ಇದ್ದೇ ಇರುತ್ತದೆ.

ನಿಮ್ಮ ಸೋಲುಗಳಿಂದ ಪಾಠ ಕಲಿಯಿರಿ, ಡಿಪ್ರೆಷನ್‌ ಬರಲು ಬಿಡಬೇಡಿ. ಮುಂದಿನ ಹೆಜ್ಜೆ ನಿಧಾನಕ್ಕೆ ಇಡಿ, ಆದರೆ ಸರಿಯಾಗಿ ಇಡಿ.

ನಾನು ಪ್ರತಿದಿನ ಏನನ್ನೋ ಕಲಿಯುತ್ತಿದ್ದೀನಿ, ನನ್ನ ಜೀವನ ಉತ್ತಮವಾಗಿದೆ ಎನ್ನುವುದನ್ನು ನಿಮಗೆ ನೀವೇ ಹೇಳಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!