BIRTHDAY | ಬರ್ಥ್‌ಡೇ ಸೆಲೆಬ್ರೇಟ್‌ ಮಾಡೋದಂದ್ರೆ ಇಷ್ಟ ಇಲ್ವಾ? ಇದನ್ನು ಓದಿ ಮನಸ್ಸು ಬದಲಾಗುತ್ತದೆ..

ಎಷ್ಟೋ ಜನರಿಗೆ ಹುಟ್ಟುಹಬ್ಬದ ಬಗ್ಗೆ ಆಸಕ್ತಿ ಇರೋದಿಲ್ಲ. ಈ ಹಿಂದೆ ಇದ್ದ ಆಸಕ್ತಿ ಈಗ ಕಾಣಿಸೋದಿಲ್ಲ. ವಯಸ್ಸು ಮೂವತ್ತಾಯ್ತು, ಬರ್ಥ್‌ಡೇ ಎಲ್ಲ ಚಿಕ್ಕ ಮಕ್ಕಳಿಗೆ ಮಾತ್ರ ಎಂದು ಹಿಂಜರೆಯುತ್ತಾರೆ. ಒಂದು ವರ್ಷ ಕಳೆದಿದ್ದೇವೆ ಎಂದರೆ ಸಾವಿಗೆ ಒಂದು ವರ್ಷ ಹತ್ತಿರ ಬಂದಿದ್ದೇವೆ ಎಂದು ಆಲೋಚಿಸುವವರೂ ಇದ್ದಾರೆ. ವರ್ಷ ಇಡೀ ಹಾಯ್‌ ಹಲೋ ಅನ್ನದ ಜನ ಬರ್ಥ್‌ಡೇ ದಿನ ಪ್ರೀತಿಯಿಂದ ವಿಶ್‌ ಮಾಡೋಕೆ ಬರ್ತಾರೆ ಎಂದು ಸಿಟ್ಟಾಗುವವರೂ ಇದ್ದಾರೆ.

ಆದರೆ ಆಲೋಚಿಸಿ ನೀವು ಯಾರ ಜೊತೆ ಪ್ರತೀ ದಿನ ಕಾಂಟಾಕ್ಟ್‌ನಲ್ಲಿ ಇದ್ದೀರಿ? ನೀವು ಅವರ ಜನ್ಮದಿನಕ್ಕೇ ವಿಶ್‌ ಮಾಡೋದು ತಾನೆ? ಸಾವಿಗೆ ಒಂದು ವರ್ಷ ಸಮೀಪ ಬಂದೆವು ಎಂದು ಆಲೋಚಿಸಬೇಡಿ, ಇನ್ನೊಂದು ವರ್ಷ ಜೀವಿಸಿದ್ದೇವೆ ಎಂದು ಖುಷಿಪಡಿ.

ಯಾಕೆ ಜನ್ಮದಿನವನ್ನು ಆಚರಿಸಬೇಕು?

ಒಂದು ವರ್ಷ ನೀವು ಏನೇ ಸಣ್ಣ ಪುಟ್ಟ ಒಳಿತು ಮಾಡಿದ್ದರೂ ಅದಕ್ಕೆ ಕೃತಜ್ಞರಾಗಿರೋದಕ್ಕೆ, ಸಾರ್ಥಕ ಜೀವನದ ಅನುಭವಕ್ಕಾಗಿ.

ನೀವು ಯಶಸ್ವಿಯಾಗಿ ಒಂದು ವರ್ಷ ಬದುಕಿದ್ದೀರಿ, ಎಷ್ಟೋ ಮಂದಿಗೆ ಬದುಕುವುದಕ್ಕೂ ಅವಕಾಶ ಇಲ್ಲ, ಜೀವನಕ್ಕೆ ಗ್ರೇಟ್‌ಫುಲ್‌ ಆಗಿರಿ.

ಒಂದು ವರ್ಷದಲ್ಲಿ ಏನು ಅಚೀವ್‌ ಮಾಡಿದ್ದೀರಿ, ಅಥವಾ ಯಾಕೆ ಮಾಡೋಕಾಗಿಲ್ಲ. ಮುಂದಿನ ವರ್ಷದಲ್ಲಿ ಏನೆಲ್ಲಾ ಮಾಡಬಹುದು ಎಂದು ಯೋಚಿಸಲು ಸಮಯ ಸಿಗುತ್ತದೆ.

ಪ್ರೀತಿಪಾತ್ರರ ಜೊತೆ ದಿನಕಳೆಯುವ ಅವಕಾಶ, ನಿಮ್ಮ ಸುತ್ತಮುತ್ತ ನಿಮ್ಮವರಷ್ಟೆ ಇದ್ದರೆ ಎಷ್ಟು ಖುಷಿ ಅಲ್ವಾ?

ನಿಮ್ಮನ್ನು ನೀವು ಪ್ಯಾಂಪರ್‌ ಮಾಡಿಕೊಳ್ಳೋಕೆ ಉತ್ತಮ ಅವಕಾಶ ಸಿಗುತ್ತದೆ. ನಿಮಗೆಷ್ಟು ವರ್ಷ ನಿಮ್ಮ ಆರೋಗ್ಯ ಹೇಗಿದೆ? ಮುಂದೆ ಹೇಗಿರಬೇಕು ಎಂದು ಯೋಚಿಸೋಕೆ ಸಮಯ ಸಿಗುತ್ತದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!