ಇಡೀ ದಿನ ಡೆಸ್ಕ್ ಮುಂದೆ ಕುಳಿತು ಕೆಲಸ ಮಾಡುವವರು, ಅಂಗಡಿಗಳಲ್ಲಿ ಕೂರುವವರು, ಒಟ್ಟಾರೆ ಹೆಚ್ಚೆಚ್ಚು ಸಮಯ ಕುಳಿತೇ ಇರುವವರು ವ್ಯಾಯಾಮ ಮಾಡಲೇಬೇಕು.
ದಿನವಿಡೀ ಕುಳಿತುಕೊಳ್ಳುವುದು ಹೃದಯರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ, ಆರಂಭಿಕ ಸಾವಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಅಧ್ಯಯನಗಳು ತೋರಿಸಿವೆ. ಜಡ ಜೀವನಶೈಲಿಯು ಮಧುಮೇಹ, ಬುದ್ಧಿಮಾಂದ್ಯತೆ ಮತ್ತು ಹೃದ್ರೋಗದಿಂದ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಜರ್ನಲ್ ಸರ್ಕ್ಯುಲೇಶನ್‌ನಲ್ಲಿ ಪ್ರಕಟವಾದ ಅಧ್ಯಯನವು ದೃಢಪಡಿಸಿದೆ.
ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯು ವ್ಯಾಯಾಮದ ಅವಧಿಯನ್ನು ಬಹಿರಂಗಪಡಿಸಿದ್ದು, ದಿನವಿಡೀ ಕುಳಿತೇ ಕೆಲಸ ಮಾಡುವವರಾಗಿದ್ದರೆ ಅಂಥವರು, ದಿನಕ್ಕೆ ಸುಮಾರು 30-40 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಸಂಶೋಧಕರು ಹೇಳುತ್ತಾರೆ. ಪ್ರತಿದಿನ 40 ನಿಮಿಷಗಳವರೆಗೆ ನಿಧಾನವಾಗಿ ಆರಂಭಿಸಿ ತೀವ್ರತೆಯ ದೈಹಿಕ ಚಟುವಟಿಕೆಯನ್ನು ನೀವು ಅನುಸರಿಸಬೇಕು. 10 ಗಂಟೆಗಳ ಕಾಲ ನೀವು ಕೂತಲ್ಲೇ ಕೂತು ಕೆಲಸ ಮಾಡುವವರಾಗಿದ್ದಾರೆ ಇಷ್ಟು ಹೊತ್ತು ವ್ಯಾಯಾಮ ಮಾಡಬೇಕು ಎನ್ನುತ್ತವೆ ಸಂಶೋಧನೆಗಳು.
ಇನ್ಮುಂದೆ ತಪ್ಪದೇ ವ್ಯಾಯಾಮ ಮಾಡ್ತೀರಿ ಅಲ್ವಾ?