Wednesday, September 17, 2025

ಮಗು ರೀತಿ ಪಕ್ಕದಲ್ಲೇ ಮೊಬೈಲ್‌ ಇಟ್ಕೊಂಡು ಮಲಗ್ತೀರಾ? ಇದನ್ನು ಓದಿ

ಪಕ್ಕದಲ್ಲೇ ಮಕ್ಕಳನ್ನು ಮಲಗಿಸಿಕೊಂಡ ಹಾಗೆ ಮೊಬೈಲ್‌ ಇಟ್ಕೋತೀರಾ? ತಲೆ ದಿಂಬಿನ ಅಡಿ ಮೊಬೈಲ್‌ ಇಟ್ಟು ಮಲಗ್ತೀರಾ? ಈ ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ ಯಾಕೆ?? ನೋಡಿ..

ಮೊಬೈಲ್ ನಲ್ಲಿ ಬರುವ ರೇಡಿಯೇಶನ್ ಅಥವಾ ತರಂಗಾಂತರದಿಂದ ಹಿರಿಯರಿಗೆ ನೆನಪು ಶಕ್ತಿ ಕಡಿಮೆಯಾಗುವ ಸಾಧ್ಯತೆಯಿದೆ, ಮೆದುಳು ಸಂಬಂಧಿ ತೊಂದರೆಗಳು ಸಹ ಉಂಟಾಗಬಹುದು.

ಮೆದುಳು ಜ್ವರ, ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಮಕ್ಕಳನ್ನು ಮಲಗಿಸಿದ ಸ್ಥಳದ ಅಕ್ಕಪಕ್ಕದಲ್ಲಿ ಮೊಬೈಲ್ ಇಟ್ಟು ಮಲಗಿದರೆ ಮಕ್ಕಳ ಮೆದುಳು ಮೇಲೆ ಮುಖ್ಯವಾಗಿ ಪರಿಣಾಮ ಬೀರುತ್ತದೆ.ಎಳೆಯ ಮನಸ್ಸಿನ ಮಕ್ಕಳ ಮೆದುಳು ಮೇಲೆ ಮೊಬೈಲ್ ನ ರೇಡಿಯೇಶನ್ ನಿಂದ ಸ್ಮರಣ ಶಕ್ತಿ ಕಡಿಮೆಯಾಗುತ್ತದೆ.

ಮೊಬೈಲ್ ಫೋನ್ ಹೆಚ್ಚಾಗಿ ಬಳಸುತ್ತಾ, ತಲೆಯ ಅಕ್ಕಪಕ್ಕ ಇಟ್ಟು ಮಲಗುವ ಚಟವಿದ್ದರೆ ನಿಧಾನವಾಗಿ ಅದು ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳಲ್ಲಿ ಬಂಜೆತನ ಸಮಸ್ಯೆಗೆ ಕಾರಣವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಯುವಜನತೆಯಲ್ಲಿ ಇನ್ಫರ್ಟಿಲಿಟಿ ಅಥವಾ ಬಂಜೆತನ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುವುದಕ್ಕೆ ಇದು ಕೂಡ ಒಂದು ಕಾರಣವಾಗಿದೆ.

ಹೆಣ್ಣುಮಕ್ಕಳಲ್ಲಿ ಮುಖ್ಯವಾಗಿ ಹಾರ್ಮೋನ್ ಅಸಮತೋಲನಕ್ಕೆ ಮೊಬೈಲ್ ಫೋನ್ ಗಳ ಅತಿಯಾದ ಬಳಕೆ, ಅವುಗಳಿಂದ ಬರುವ ರೇಡಿಯೇಶನ್ ಕಾರಣವಾಗುತ್ತದೆ.

ಋತುಮತಿಯ ಸಮಸ್ಯೆ, ಋತುಮತಿ ಸಮಯದಲ್ಲಿ ಹೊಟ್ಟೆನೋವು ಹೆಚ್ಚಾಗುವಿಕೆ, ರಕ್ತಸ್ರಾವಕ್ಕೆ ಕಾರಣವಾಗುವಿಕೆ ಇತ್ಯಾದಿ ಸಮಸ್ಯೆಗಳು ಹದಿಹರೆಯದವರು, ಯುವತಿಯರಲ್ಲಿ ಕಾಣುತ್ತದೆ.

ಇದನ್ನೂ ಓದಿ