ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿರಿಯಡ್ಸ್ ಹೊಟ್ಟೆನೋವನ್ನು ತಾಳಲಾರದೆ ಪೇನ್ ಕಿಲ್ಲರ್ ನುಂಗಿದ ಬಾಲಕಿಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ.
ಇಂಗ್ಲೆಂಡ್‌ನಲ್ಲಿ 16 ವರ್ಷದ ಲೈಲಾ ತನ್ನ ಸ್ನೇಹಿತೆಯರ ಸಲಹೆ ಕೇಳಿ ಹೊಟ್ಟೆ ನೋವು ನಿವಾರಕ ಮಾತ್ರೆ ತೆಗೆದುಕೊಂಡಿದ್ದಾಳೆ.
ಮುಟ್ಟಿನ ಮೂರೂ ದಿನವೂ ಲೈಲಾ ಮಾತ್ರೆ ತೆಗೆದುಕೊಂಡಿದ್ದು, ಹೊಟ್ಟೆನೋವು ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಇದೆ. ಮೂರು ದಿನದ ನಂತರ ಲೈಲಾಗೆ ವಾಂತಿ, ಬೇಧಿ ಹಾಗೂ ತಲೆನೋವು ಬಾಧಿಸಿದೆ.
ಮನೆಯವರು ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಸಿಟಿ ಸ್ಕ್ಯಾನ್‌ನಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ ಲೈಲಾ ಬದುಕುಳಿಯಲಿಲ್ಲ.
ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ, ಪ್ರತಿಯೊಬ್ಬರ ದೇಹವೂ ವಿಭಿನ್ನ. ಪ್ರತಿಯೊಬ್ಬರಿಗೂ ತಮ್ಮದೇ ಆದ ಆರೋಗ್ಯ ಸಮಸ್ಯೆಗಳು ಇರುತ್ತದೆ. ಯಾವ ಮಾತ್ರೆ ಯಾವ ಸಮಯದಲ್ಲಿ ಹೇಗೆ ರಿಯಾಕ್ಟ್ ಮಾಡುತ್ತದೆ ತಿಳಿಯುವುದಿಲ್ಲ. ಏನೇ ಸಮಸ್ಯೆಯಾದರೂ ವೈದ್ಯರನ್ನು ಭೇಟಿ ಮಾಡಿ.