ಹೆಸರಿಲ್ಲದಿದ್ರೆ ನಮ್ಮ ಐಡೆಂಟಿಟಿ ಏನು? ರಸ್ತೆಯಲ್ಲಿ ಹೋಗುವಾಗ ಯಾರೋ ಗೊತ್ತಿರುವವರು ನಮ್ಮನ್ನು ದೂರದಿಂದ ನೋಡಿದ್ರೆ ಏನೆಂದು ಕೂಗ್ಬೇಕಿತ್ತು? ಹೆಸರು ಬೇಸಿಕ್. ಬೇಕೇ ಬೇಕು. ನಮ್ಮ ಹೆಸರು ಚನ್ನಾಗಿದ್ರೂ ನಮ್ಮದೇ ಹೆಸರಿನ ಸ್ನೇಹಿತರ ಜೊತೆ ಬೆಳೆದು ಅಪ್ಪ ಅಮ್ಮ ಒಂದೊಳ್ಳೆ ಹೆಸರಿಡಬೇಕಿತ್ತು ಎಂದು ಅಂದುಕೊಳ್ತೀರಿ.. ನಿಮ್ಮ ಮಕ್ಕಳಿಗೆ ಹೆಸರಿಡುವ ಸಂದರ್ಭ ಬಂದಾಗ ಎಲ್ಲರಿಗಿಂತ ವಿಭಿನ್ನವಾದ ಹೆಸರು ಇಡಬೇಕು, ಅದು ಯಾವಾಗ್ಲೂ ಕಿವಿಗೆ ಕೇಳೋಕೆ ಇಂಪಾಗಿರಬೇಕು ಅನ್ಕೋತೀರಿ ಅಲ್ವಾ? ಮಕ್ಕಳಿಗೆ ಹೆಸರನ್ನು ಹೀಗೆ ಹುಡುಕಿ..
ನೀವು ಜಾತಕ ಹಾಗೂ ನಿಮ್ಮ ಗುರುಗಳನ್ನು ಕೇಳಿ ಇಂಥದ್ದೇ ಅಕ್ಷರದಿಂದ ಆರಂಭವಾಗುವ ಹೆಸರನ್ನು ಇಡಬಹುದು. ಅಥವಾ ಯಾವುದನ್ನೂ ಕೇಳದೆ ನೀವು ಇಷ್ಟಪಟ್ಟ ಹೆಸರನ್ನು ಇಡಬಹುದು. ಹೆಸರನ್ನು ಇಲ್ಲಿ ಹುಡುಕಿ..
ನಿಮಗೆಲ್ಲರಿಗೂ ಇದು ಗೊತ್ತಿರೋದೇ ಇಂಟರ್ನೆಟ್, ಇಂಟರ್‌ನೆಟ್‌ನಲ್ಲಿ ಒಂದೊಂದೆ ಅಕ್ಷರಕ್ಕೂ ಸಾಲು ಸಾಲು ಹೆಸರುಗಳಿವೆ. ಅದರಲ್ಲಿ ನಿಮಗೆ ಬೇಕಾದ್ದು ಆರಿಸಿ. ಆದರೆ ಅದರ ಮೀನಿಂಗ್ ಸರಿಯಾಗಿದೆಯಾ ಕ್ರಾಸ್ ಚೆಕ್ ಮಾಡಿ.
ಇನ್ನು ಎರಡನೇ ಹಾಗೂ ಬೆಸ್ಟ್ ಆಪ್ಷನ್ ಎಂದರೆ ಕನ್ನಡ ಶಬ್ದಕೋಶ. ಹೌದು, ಡಿಕ್ಷನರಿಯಲ್ಲಿ ನೀವು ಕೇಳಿದ ಕೇಳಿಲ್ಲದ ಹೊಸ ಹಳೆ ಎಲ್ಲ ಪದಗಳು ಇವೆ. ಇದರಲ್ಲಿ ಸರಿಯಾದ ಅರ್ಥವೂ ಇರುತ್ತದೆ. ಮಗುವಿಗೆ ಹೆಸರು ಆರಿಸಿ.
ಇನ್ನು ನೀವು ದೈವ ಭಕ್ತರಾಗಿದ್ದರೆ ವಿಷ್ಣು ಸಹಸ್ರನಾಮ, ಮಹಾಭಾರತ ಹಾಗೂ ರಾಮಾಯಣದಲ್ಲಿನ ಹೆಸರುಗಳನ್ನು ಆರಿಸಿ ಇಡಬಹುದು. ಇವು ಯಾವಾಗಲೂ ಬೆಸ್ಟ್.