ನಮ್ಮಲ್ಲಿರುವ ಅಣುಬಾಂಬ್ ಏನು ಫ್ರಿಡ್ಜ್‌ನಲ್ಲಿಡುತ್ತೇವೆ ಎಂದುಕೊಂಡಿದ್ದೀರಾ?: ಕಾಂಗ್ರೆಸ್ ನಾಯಕನಿಗೆ ಯೋಗಿ ಆದಿತ್ಯನಾಥ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನವನ್ನು ಭಾರತ ಗೌರವಯುತವಾಗಿ ಕಾಣದಿದ್ದರೆ, ಅವರು ಅಣುಬಾಂಬ್ ಹಾಕಿಬಿಡುತ್ತಾರೆ ಎಂಬ ಹೇಳಿಕೆಗೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.

ನಮ್ಮಲ್ಲಿರುವ ಅಣುಬಾಂಬ್ ಏನು ಫ್ರಿಡ್ಜ್‌ನಲ್ಲಿಡುತ್ತೇವೆ ಎಂದುಕೊಂಡಿದ್ದೀರಾ? ಇದು ಹೊಸ ಭಾರತ. ನಾವು ಯಾರ ಮೇಲೂ ದಾಳಿ ಮಾಡಲ್ಲ. ಆದರೆ ನಮ್ಮ ಮೇಲೆ ದಾಳಿ ಮಾಡಿದರೆ ನುಗ್ಗಿ ಹೊಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್, ಮಣಿಶಂಕರ್ ಆಯ್ಯರ್ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ್ದದ್ದು, ಇದು ಹೊಸ ಭಾರತ, ಯಾರ ಗೊಡ್ಡು ಬೆದರಿಕೆಗೆ ಹೆದರುವ ದೇಶವಲ್ಲ. ನಾವು ಅಣುಂಬಾಂಬ್‌ನ್ನು ಫ್ರಿಡ್ಜ್‌ನಲ್ಲಿ ಇಡಲು ತಯಾರಿಸಿಲ್ಲ. ನಾವು ಯಾರನ್ನೂ ಕೆಣಕುವುದಿಲ್ಲ, ಯಾರ ಮೇಲೂ ದಾಳಿ ಮಾಡುವುದಿಲ್ಲ. ಆದರೆ ನಮ್ಮನ್ನು ಕೆಣಕಿದರೆ ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ. ಇದು ಆಧುನಿಕ ಭಾರತ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋ ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನ ಅವರ ಜನತೆಗೆ ಮೊದಲು ನ್ಯಾಯ ಒದಗಿಸಲಿ. ಆಧುನಿಕ ಭಾರತದ ಶಕ್ತಿ ಸಾಮರ್ಥ್ಯ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!