ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಹಾಯದ ಹೆಸರಲ್ಲಿ ಎಟಿಎಂನಲ್ಲಿ ಹಣ ಹೊಡೆಯುತ್ತಿರುವ ಖದೀಮರ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ. ಯಾರಿಗೆ ಎಟಿಎಂನಲ್ಲಿ ದುಡ್ಡು ತೆಗೆದುಕೊಳ್ಳಲು ಬರುವುದಿಲ್ಲ ಅಂತವರೇ ಇವರ ಟಾರ್ಗೆಟ್.
ಹೌದು ! ನಿಮ್ಮ ಎಟಿಎಂನಲ್ಲಿ ಸಮಸ್ಯೆಯಾಗ್ತಿದೆ. ನಾವು ನಿಮಗೆ ಸಹಾಯ ಮಾಡ್ತೀವಿ, ಎಟಿಎಂ ಕಾರ್ಡ್ ಕೊಡಿ ನಾವು ಹಣ ತಗೆದುಕೊಡ್ತೀವಿ ಎಂದು ನಂಬಿಸಿ ಎಟಿಎಂ ಕಾರ್ಡ್‌ಗಳನ್ನು ಬದಲಾಯಿಸುತ್ತಾರೆ. ನಂತರ ಎಟಿಎಂ ಕಾರ್ಡ್ ಸಮಸ್ಯೆಯಾಗಿದೆ. ನಾಳೆ ಪ್ರಯತ್ನಿಸಿ ಅಂತಾರೆ. ಆದರೆ ಅಷ್ಟರೊಳಗೆ ನಿಜವಾದ ಕಾರ್ಡ್ ಬಳಸಿ ಖಾತೆಯನ್ನು ಖಾಲಿ ಮಾಡುತ್ತಾರೆ.
ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಇಂತಹ ವಂಚನೆ ಜಾಲವನ್ನು ಪೊಲೀಸರು ಹಿಡಿದಿದ್ದಾರೆ. ಈ ವಂಚನೆಗೆ ಬಲಿಯಾದ ಗ್ರಾಹಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ, ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 17,000 ರೂಪಾಯಿ ನಗದು, ಒಂದು ಡಜನ್ ಎಟಿಎಂ ಕಾರ್ಡ್‌ಗಳು, ಒಂದು ಸ್ಕಾರ್ಪಿಯೋ ಕಾರು, ಒಂದು ಬೈಕ್ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಬಹಳ ಸಮಯದಿಂದ ಈ ಅಪರಾಧ ಕೃತ್ಯವನ್ನು ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ.