WEALTH | ಗೃಹದಲ್ಲಿ ಸದಾಕಾಲ ಲಕ್ಷ್ಮಿ ನೆಲೆಸಬೇಕಾ? ಈ ಐದು ವಸ್ತುಗಳನ್ನು ಮನೆಯಲ್ಲೇ ಇಡಬೇಡಿ

ಮನೆಯಲ್ಲಿ ಕೆವೊಂದು ವಸ್ತುಗಳನ್ನು ಇಡುವುದರಿಂದ ಕೂಡ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಇನ್ನು ಕೆಲವೊಂದು ನಿಸರ್ಗದತ್ತ ಅಂಶಗಳು ಮನೆಯನ್ನು ಸೇರುವುದರಿಂದ ಒಳ್ಳೆಯದಾದರೆ ಇನ್ನು ಕೆಲವು ಅಂಶಗಳಿಂದ ಆ ಮನೆಗೆ ಕೆಟ್ಟದ್ದಾಗುತ್ತದೆ. ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಬೇಕು ಎಂದಾದರೆ ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ..

ಮನೆಯೊಳಗೆ ಪಕ್ಷಿಗಳು ಬಂದರೆ ಆ ಮನೆಗೆ ಅದೃಷ್ಟ ಕುಲಾಯಿಸುತ್ತದೆ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಪಾರಿವಾಳದ ವಿಷಯದಲ್ಲಿ ಅದು ಶುದ್ಧ ಸುಳ್ಳು. ಪಾರಿವಾಳಗಳು ಮನೆಯಲ್ಲಿ ಗೂಡನ್ನು ನಿರ್ಮಿಸುವುದರಿಂದ ಆ ಮನೆಯಲ್ಲಿನ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಾ ಹೋಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಪಾರಿವಾಳವೊಂದು ಗೂಡನ್ನು ನಿರ್ಮಿಸಿ ಅದರಲ್ಲಿ ಮೊಟ್ಟೆಗಳನ್ನಿಟ್ಟಿದ್ದರೆ, ಸ್ವಲ್ಪ ಸಮಯ ಅಂದರೆ ಮೊಟ್ಟೆಗಳು ಮರಿಯಾಗುವ ತನಕ ಕಾದು ಅದು ಗೂಡಿನಿಂದ ಹಾರಿಹೋದ ನಂತರ ಆ ಗೂಡನ್ನು ಮನೆಯಿಂದ ಹೊರಹಾಕಿ.

ಜೇಡರ ಹುಳು ಮನೆಯಲ್ಲಿ ಬಲೆಹೆಣೆಯುವುದು ಒಳ್ಳೆಯದಲ್ಲ ಎನ್ನುವುದು ಸಾಕಷ್ಟು ಜನರಿಗೆ ಈಗಾಗಲೇ ಗೊತ್ತಿರಬಹುದು. ಜೇಡರ ಬಲೆ ಮನೆಯಲ್ಲಿದ್ದರೆ ಅದು ಆ ಮನೆಯ ದುರಾದೃಷ್ಟವನ್ನು ಸೂಚಿಸುತ್ತದೆ. ಹಾಗಾಗಿ ಒಂದುವೇಳೆ ನೀವು ಮನೆಯಲ್ಲಿ ಜೇಡರ ಬಲೆಯನ್ನು ಕಂಡರೆ ತಕ್ಷಣವೇ ಅದನ್ನು ಮನೆಯಿಂದ ತೆಗೆದುಹಾಕಿ. ಜೇಡರ ಬಲೆ ಮನೆಯಲ್ಲಿರುವುದರಿಂದ ನಮ್ಮ ಜೀವನದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಮತ್ತು ಆ ಮನೆಯ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದದಂತೆ ಮಾಡುತ್ತದೆ.

ಜೇನು ಸವಿಯಲು ಮಧುರವಾಗಿದ್ದರೂ ಕೂಡ ಅದು ಮನೆಯಲ್ಲಿ ಗೂಡುಕಟ್ಟಿದರೆ ಆ ಮನೆಯ ಸದಸ್ಯರಿಗೆ ಅದುವೇ ಒಳಿತಲ್ಲ. ಯಾವ ಮನೆಯಲ್ಲಿ ಜೇನುಗೂಡು ಕಟ್ಟಿರುತ್ತದೆಯೋ ಆ ಮನೆಯಿಂದ ಲಕ್ಷ್ಮಿಯು ಹೊರಹೋಗುತ್ತಾಳೆ ಇದರಿಂದ ಅ ಮನೆಯಲ್ಲಿ ಬಡತನ ಮತ್ತು ದುರಾದೃಷ್ಟ ಉದ್ಭವವಾಗುತ್ತದೆ. ಜೇನು ಗೂಡನ್ನು ಎಲ್ಲರಿಂದಲೂ ತೆಗೆಯಲು ಸಾಧ್ಯವಿಲ್ಲ. ಜಾಗರೂಕರಿಂದ ನುರಿತ ಜೇನು ಹಿಡಿಯುವವರನ್ನು ಕರೆಸಿ ಜೇನು ಗೂಡನ್ನು ತೆಗೆದು ಹಾಕುವುದು ಉತ್ತಮ. ಒಂದುವೇಳೆ ನಿಮ್ಮ ಮನೆಯಲ್ಲೂ ಜೇನುಗೂಡಿದ್ದರೆ ಯಕ್ಷಣವೇ ಅದನ್ನು ತೆಗೆದು ಹಾಕುವತ್ತ ಗಮನ ಹರಿಸಿ.

ಇಂದಿಗೂ ಕೂಡ ಅದೆಷ್ಟೋ ಜನರ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಟ್ಟುಕೊಳ್ಳುವುದಿಲ್ಲ. ಮನೆಯಲ್ಲಿ ಅಜ್ಜ, ಅಜ್ಜಿ ಅಥವಾ ಹಿರಿಯರಿದ್ದರೆ ಒಡೆದ ಕನ್ನಡಿಯಲ್ಲಿ ಮುಖ ನೋಡಲು ಕೂಡ ಬಿಡುವುದಿಲ್ಲ. ಹೌದು, ಒಡೆದ ಕನ್ನಡಿ ನಮ್ಮ ಆರ್ಥಿಕ ಅಭಿವೃದ್ಧಿಗೆ ಅಷ್ಟು ಅಡ್ಡಿಪಡಿಸುತ್ತದೆ. ಒಡೆದ ಕನ್ನಡಿ ಮನೆಯಲ್ಲಿದ್ದರೆ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿ, ಆ ಮನೆಯಲ್ಲಿ ನೆಲೆಯಾಗಿದ್ದ ಲಕ್ಷ್ಮಿಯನ್ನು ಮನೆಯಿಂದ ಹೊರಹಾಕುತ್ತದೆ. ಅಷ್ಟು ಮಾತ್ರವಲ್ಲ, ಇದು ಆ ಮನೆಯ ಬಡತನವನ್ನೂ ಕೂಡ ಸೂಚಿಸುತ್ತದೆ. ಒಡೆದ ಕನ್ನಡಿಯನ್ನು ಮನೆಯಿಂದ ಹೊರ ಹಾಕುವುದರಿಂದ ಮನೆಯಲ್ಲಿದ್ದ ದುಷ್ಟ ಶಕ್ತಿಗಳು ಅದೇ ಕೂಡಲೇ ಮನೆಬಿಟ್ಟು ಹೋಗುತ್ತದೆ.

ಈ ಮೇಲೆ ನಾವು ಹೇಳಿರುವ ನಾಲ್ಕು ವಸ್ತುಗಳಂತೆ ಈ ವಸ್ತುಗಳೂ ಕೂಡ ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು. ತುಂಬಾ ವರ್ಷಗಳಿಂದ ಉಪಯೋಗಿಸದ ವೈರ್‌ಗಳು ನಿಮ್ಮ ಮನೆಯಲ್ಲಿದ್ದರೆ ಅದನ್ನು ಇಂದೇ ಮನೆಯಿಂದ ಹೊರಹಾಕುವುದು ಉತ್ತಮ. ಹಳೆಯ ವೈರ್‌ಗಳು ಮಾತ್ರವಲ್ಲ, ಒಂದುವೇಳೆ ಮನೆಯಲ್ಲಿ ಯಾವುದೇ ವಿದ್ಯುತ್‌ ವಸ್ತುಗಳು ಕಾರ್ಯನಿರ್ವಹಿಸದೇ ಹಾಗೇ ಇದ್ದರೆ ಅದನ್ನು ಮೊದಲು ಸರಿಪಡಿಸಿಕೊಳ್ಳುವುದು ಒಳ್ಳೆಯದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!