September 26, 2026
Saturday, September 26, 2026
spot_img

ನಿಂಗಿದು ಬೇಕಿತ್ತಾ ಮಗಳೇ….! ಗಂಡನಿಗೆ ಗುಲಾಬಿ ಹೂ ಕೊಟ್ಟ ಮಹಿಳೆ ವಿರುದ್ಧ FIR!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೋಸ್ ಡೇ ಆಚರಣೆಯ ವೇಳೆ ಪತಿಗೆ ಗುಲಾಬಿ ನೀಡಿದ್ದು, ದಂಪತಿಗೆ ಇದೀಗ ಕಾನೂನು ತೊಂದರೆಯಾಗಿ ಪರಿಣಮಿಸಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧಾರವಾಗಿ ಮಹಿಳೆ ಮತ್ತು ಆಕೆಯ ಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಮಹಿಳೆ ಪತಿಗೆ ಗುಲಾಬಿ ನೀಡುವ ಮುನ್ನ ವೈನ್ ಬಾಟಲಿ ಕೊಡುವ ದೃಶ್ಯ ಕಾಣಿಸಿಕೊಂಡಿತ್ತು. ಬಿಹಾರದಲ್ಲಿ ಮದ್ಯಪಾನ ನಿಷೇಧ ಇರುವುದರಿಂದ ಇದು ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ನಂತರ ಹೊರಬಂದ ಮತ್ತೊಂದು ಕ್ಲಿಪ್‌ನಲ್ಲಿ ಮಹಿಳೆ ಪಿಸ್ತೂಲ್ ಹಿಡಿದು ಪೋಸ್ ನೀಡಿರುವುದು ಪೊಲೀಸರ ಗಮನ ಸೆಳೆದಿದೆ.

ಇದನ್ನೂ ಓದಿ:

ತನಿಖೆಯ ವೇಳೆ ಫೋಟೋದಲ್ಲಿದ್ದ ಗನ್ ಪರವಾನಗಿ ಹೊಂದಿದ್ದ ಮತ್ತೊಬ್ಬ ವ್ಯಕ್ತಿಗೆ ಸೇರಿದದ್ದು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಗನ್ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮಹಿಳೆ ಈ ವಿಡಿಯೋಗಳನ್ನು ತಾನೇ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ತೆಗೆದುಹಾಕುವ ಮುನ್ನವೇ ಲಕ್ಷಾಂತರ ಜನ ವೀಕ್ಷಿಸಿದ್ದರು. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Must Read