ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಲಾಲ್ ಸಿಂಗ್ ಚೆಡ್ಡಾʼ ಆಯ್ತು..ಇದೀಗ ನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸಿ ಪನ್ನು ಗಾಹೂ ಪಾವೈಲ್ ಗುಲಾಟಿ ಅಭಿನಯದ ‘ದೊಬಾರಾ’ ಸರದಿ. ಸಿನಿಮಾ ಆಗಸ್ಟ್-19ರಂದು ಪ್ರೇಕ್ಷಕರ ಮುಂದೆ ಬಂದಿದೆ. ಆ ಸಿನಿಮಾ ನಿಜವಾಗಿಯೂ ರಿಲೀಸ್ ಆಗಿದ್ಯಾ? ಅಂತ ಅನೇಕರು ಬಾಯ್ಮೇಲೆ ಬೆರಳಿಟ್ಟು ಆಶ್ಚರ್ಯ ಪಡುತ್ತಿದ್ದಾರೆ.
ಚಿತ್ರಮಂದಿರಗಳಲ್ಲಿ ದೊಬಾರಾ ಸಿನಿಮಾ ಆಕ್ಯುಪೆನ್ಸಿ ತುಂಬಾ ಅಂದ್ರೆ ತುಂಬಾ ಕೆಟ್ಟದಾಗಿದೆ. ಕೇವಲ 2-3 ಪರ್ಸೆಂಟ್ ಆಕ್ಯುಪೆನ್ಸಿ ಅಷ್ಟೇ ದಾಖಲಾಗಿದೆ. ಚಿತ್ರದ ಹಲವಾರು ಆರಂಭಿಕ ಪ್ರದರ್ಶನಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ಹಿಂದೆಂದೂ ಕಂಡಿರಲಿಲ್ಲ ಎಂದು ಥಿಯೇಟರ್ ಮಾಲೀಕರು ದೂರುತ್ತಿದ್ದಾರೆ. ವಿತರಕರ ಪರಿಸ್ಥಿತಿ ಅಂತೂ ಇನ್ನೂ ಹದಗೆಟ್ಟಿದೆ.
ಚಲನಚಿತ್ರ ವಿಶ್ಲೇಷಕ ಸುಮಿತ್ ಕಡೆಲ್ ಅವರು ದೊಬಾರಾ ಬಗ್ಗೆ ಟ್ವೀಟ್ ಮಾಡಿದ್ದು, “#Dobaaraa ಗಲ್ಲಾಪೆಟ್ಟಿಗೆಯಲ್ಲಿ ವಿನಾಶಕಾರಿ ಹಂತಕ್ಕೆ ತಲುಪಿದೆ, ಕೇವಲ 2-3% ಆಕ್ಯುಪೆನ್ಸಿಯನ್ನು ನೋಂದಾಯಿಸಿದೆ. ಪ್ರೇಕ್ಷಕರಿಲ್ಲದ ಕಾರಣ ಅನೇಕ ಆರಂಭಿಕ ಪ್ರದರ್ಶನಗಳು ಸಹ ರದ್ದುಗೊಂಡಿವೆ. ಚಿತ್ರವು ತನ್ನ ಆರಂಭಿಕ ದಿನದಂದು ಕೇವಲ 20-35 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿರಬಹುದು ಎಂದು ಅಂದಾಜಿಸಿದ್ದಾರೆ. ಸಿನಿಮಾದ ಬಾಕ್ಸ್ ಆಫೀಸ್ ಭವಿಷ್ಯ 1.25 ರಿಂದ 1.50 ಕೋಟಿ ರೂಪಾಯಿ ಆದರೆ ಹೆಚ್ಚು” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಮ್ಮ ಸಿನಿಮಾವನ್ನೂ ಬಹಿಷ್ಕರಿಸಿ ಪ್ಲೀಸ್:
ಸಿನಿಮಾ ಬಹಿಷ್ಕಾರ ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಆ ಹೊಡೆತದಿಂದ ಸಾಕಷ್ಟು ಸಿನಿಮಾಗಳು ಬಾಧಿತವಾಗಿವೆ. ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚೆಡ್ಡಾ’ ಕೂಡ ಅದೇ ದುಸ್ಥಿತಿಯನ್ನು ಎದುರಿಸಿದೆ. ಸ್ಟಾರ್ ಸಿನಿಮಾನೇ ಹೀಗೆ ಅತಂತ್ರ ಆದರೆ ಇನ್ನೂ ತಾಪ್ಸಿ ನಟನೆ ಸಿನಿಮಾ ಬಗ್ಗೆ ಹೇಳೋದೇನಿದೆ? ಇದರ ನಡುವೆ ತಾಪ್ಸಿ ಮತ್ತು ಅನುರಾಗ್ ಕಶ್ಯಪ್ ಸಿನಿಮಾ ಬಹಿಷ್ಕಾರ ಬಗ್ಗೆ ಮಾತನಾಡಿ, ವಿವಾದದಲ್ಲಿ ಸಿಲುಕಿಕೊಂಡರು. ‘ದಯವಿಟ್ಟು ನಮ್ಮ ಚಿತ್ರವನ್ನೂ ಬಹಿಷ್ಕರಿಸಿ’ ಎಂದು ವ್ಯಂಗ್ಯವಾಗಿ ಮಾತನಾಡಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಅವರ ವ್ಯಂಗ್ಯತನವನ್ನು ಪ್ರೇಕ್ಷಕರು ಗಂಭೀರವಾಗಿ ಪರಿಗಣಿಸಿ ಸಿನಿಮಾವನ್ನು ಬಹಿಷ್ಕಾರ ಮಾಡಿದ್ದಾರೆ.