ಮಿಲಿಟರಿ ವ್ಯಾಯಾಮಕ್ಕೆ ಸುಖೋಯ್‌ ಗಳೊಂದಿಗೆ ಆಸ್ಟ್ರೇಲಿಯಾ ತಲುಪಿದೆ ಭಾರತೀಯ ವಾಯುಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್ (RAAF) ನೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮವನ್ನು ಪ್ರಾರಂಭಿಸುವ ಉದ್ದೇಶದಿಂದ, ಭಾರತೀಯ ವಾಯುಪಡೆ (IAF) ತುಕಡಿಯು ಆಗಸ್ಟ್ 19 ರಂದು ಆಸ್ಟ್ರೇಲಿಯಾ ಖಂಡವನ್ನು ತಲುಪಿದೆ. ಡಾರ್ವಿನ್‌ನಲ್ಲಿ ಆಗಸ್ಟ್ 19 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿರುವ ಸೇನಾ ವ್ಯಾಯಾಮ ʼಪಿಚ್ ಬ್ಲ್ಯಾಕ್ 2022ʼ ರಲ್ಲಿ ಭಾಗವಹಿಸಲು ಭಾರತೀಯ ವಾಯುಪಡೆ ಸಜ್ಜಾಗಿದೆ.

ಇದು ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್ ನಿಂದ ಆಯೋಜಿಸಲ್ಪಡುವ ದ್ವೈವಾರ್ಷಿಕ ಬಹು-ರಾಷ್ಟ್ರೀಯ ವ್ಯಾಯಾಮವಾಗಿದ್ದು ಯುದ್ಧ ಸಂಬಂಧಿ ತಂತ್ರಗಾರಿಕೆಯ ಮೇಲೆ ಕೇಂದ್ರೀಕೃತವಾಗಿದೆ. ಇದರ ಹಿಂದಿನ ಆವೃತ್ತಿಯನ್ನು 2018 ರಲ್ಲಿ ನಡೆಸಲಾಗಿತ್ತು. 2020 ರ ಆವೃತ್ತಿಯನ್ನು COVID-19 ಸಾಂಕ್ರಾಮಿಕ ರೋಗದಿಂದಾಗಿ ರದ್ದುಗೊಳಿಸಲಾಯಿತು. ಪ್ರಸ್ತುತ ಹೊಸ ಆವೃತ್ತಿಯನ್ನು ಆಯೋಜಿಸಲಾಗಿದೆ.

ಈ ವ್ಯಾಯಾಮದಲ್ಲಿ 100 ಕ್ಕೂ ಹೆಚ್ಚು ವಿಮಾನಗಳು ಮತ್ತು ವಿವಿಧ ವಾಯುಪಡೆಗಳ 2,500 ಮಿಲಿಟರಿ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಭಾರತೀಯ ವಾಯುಪಡೆ ತಂಡದ ನೇತೃತ್ವವನ್ನು ಗ್ರೂಪ್ ಕ್ಯಾಪ್ಟನ್ YPS ನೇಗಿ ವಹಿಸಿಕೊಂಡಿದ್ದು ತುಕಡಿಯು 100 ಕ್ಕೂ ಹೆಚ್ಚು ವಾಯು ಯೋಧರನ್ನು ಒಳಗೊಂಡಿದೆ, ನಾಲ್ಕು Su-30 MKI ಫೈಟರ್‌ಗಳು ಮತ್ತು ಎರಡು C-17 ವಿಮಾನಗಳನ್ನು ನಿಯೋಜಿಸಲಾಗಿದೆ. ಸಂಕೀರ್ಣ ಪರಿಸರದಲ್ಲಿ ಬಹು-ಡೊಮೇನ್ ವಾಯು ಯುದ್ಧ ಕಾರ್ಯಾಚರಣೆಗಳ ಕುರಿತು ಉಭಯ ದೇಶಗಳೂ ಚಿಂತನೆ ನಡೆಸಿದ್ದು  ಎರಡೂ ಕಡೆಯವರು ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!