ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಂಗಳೂರಿನಲ್ಲಿ ಅಮಾನುಷವಾದ ಘಟನೆ ನಡೆದಿದ್ದು, ವೃದ್ಧ ಅತ್ತೆ ಮತ್ತು ಮಾವನ ಮೇಲೆ ಲೇಡಿ ಡಾಕ್ಟರ್ ಆಗಿರುವ ಸೊಸೆಯೊಬ್ಬಳು ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ.
ಸೊಸೆ ಪ್ರಿಯದರ್ಶಿನಿ ವಿಕ್ಟೊರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ.ಕಳೆದ 10 ವರ್ಷದಿಂದ ಅತ್ತೆ ಮತ್ತು ಮಾವನಿಗೆ ಪ್ರಿಯದರ್ಶಿನಿ ಕಿರುಕುಳ ನೀಡುತ್ತಿದ್ದಾಳೆ.ಕಿರುಕುಳ ತಾಳದೆ ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಸೊಸೆ ಪ್ರಿಯದರ್ಶಿನಿ ಜೊತೆ ಮೊಮ್ಮಕ್ಕಳು ಸಹ ತಾತ ಅಜ್ಜಿ ಎನ್ನದೆ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಆರ್‌ಎಚ್‌ಸಿಎಸ್ ಲೇಔಟ್ ನಿವಾಸಿ ಜೆ.ನರಸಿಂಹಯ್ಯ ದೂರು ನೀಡಿದ್ದಾರೆ. ನನ್ನ ಮಗ ನವೀನ್ ಕುಮಾರ್ ಮತ್ತು ಪ್ರಿಯ ದರ್ಶಿನಿಗೆ 2007ರಲ್ಲಿ ಮದುವೆಯಾ ಗಿದ್ದು, ಸದ್ಯ ವಿಚ್ಚೇದನದ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ನಡುವೆ ಮಾ.10ರಂದು ರಾತ್ರಿ 8.30ಕ್ಕೆ ಪ್ರಿಯ ದರ್ಶಿನಿ ಹಾಗೂ ಆಕೆಯ ಮಕ್ಕಳು ಬಂದು ಹಲ್ಲೆ ಮಾಡಿದ್ದು, ಪ್ರಾಣ ಬೆದ ರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.ಅನ್ನಪೂರ್ಣೇಶ್ವರಿನಗರ ಪೊಲಿಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಲಿಸಲಾಗಿತ್ತು.
ಇತ್ತ ಅತ್ತೆ ಹಾಗೂ ಮಾವನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪೊಲೀಸ್ ಠಾಣೆಗೆ ವಿಚಾರಣೆ ಹಾಜರಾಗಿದ್ದ ಪ್ರಿಯದರ್ಶನಿ ಗಲಾಟೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.
ನನ್ನ ಪುತ್ರ 10ನೇ ತರಗತಿ ಓದುತ್ತಿದ್ದಾನೆ. ಮುಂದಿನ ಓದಿನ ಬಗ್ಗೆ ಚರ್ಚೆ ನಡೆಸಲು ನಾನು ಅನ್ನಪೂರ್ಣೇಶ್ವರಿ ನಗರದಲ್ಲಿ ನೆಲೆಸಿರುವ ವೈದ್ಯ, ಪುತ್ರನ ತಂದೆಯ ನಿವಾಸಕ್ಕೆ ಆಗಮಿಸಿದ್ದೆ. ಈ ಸಂದರ್ಭದಲ್ಲಿ ನನ್ನ ಬಳಿಯಿದ್ದ ಸಣ್ಣ ಮಗುವನ್ನು ಕಂಡು ಅನುಮಾನದಿಂದ ಅತ್ತೆ ಮಾವ ಕೊಂಕು ಮಾತನ್ನು ಆಡಿದ್ದರು. ಈ ಮಾತಿನಿಂದ ಬೇಸತ್ತು ಹೋಗಿದ್ದೆ. ಮತ್ತಷ್ಟು ಕೊಂಕು ಮಾತು ಆಡಿದ್ದರಿಂದ ಜಗಳ ವಿಕೋಪಕ್ಕೆ ತಿರುಗಿತು ಎಂದು ವೈದ್ಯೆ ಹೇಳಿದ್ದಾಳೆ .
ಪೊಲೀಸರು ವಿಚಾರಣೆ ನಡೆಸಿದ ಬಳಿಕ ಎರಡು ಕಡೆಯವರಿಗೆ ಕೌನ್ಸಿಲಿಂಗ್‌ಗೆ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾರೆ.