ಪಾಡ್‌ಕಾಸ್ಟ್‌ನಲ್ಲಿ ಸುದೀರ್ಘ ಸಂದರ್ಶನ ನೀಡಿದ ಪ್ರಧಾನಿ: ಜನರ ಸೇವೆ ದೇವರ ಸೇವೆಗೆ ಸಮಾನ ಎಂದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸತತ ಮೂರು ಗಂಟೆಗಳ ಕಾಲ ಯುಎಸ್​ ಮೂಲದ ಲೆಕ್ಸ್ ಫ್ರಿಡ್ಮನ್​ ಜೊತೆ ಪಾಡ್​ಕಾಸ್ಟ್​​ನಲ್ಲಿ ಭಾಗಿಯಾಗಿದ್ದು. ಅದ್ಭುತ ಮಾತುಕತೆಗಳು ನಡೆದಿವೆ.

ಫ್ರೀಡ್​​ಮ್ಯಾನ್ ತಮ್ಮ ಯೂಟ್ಯೂಬ್ ಚಾನಲ್​​ನಲ್ಲಿ ಈ ಪೋಡ್​​ಕ್ಯಾಸ್ಟ್ ಅಪ್​​ಲೋಡ್ ಮಾಡಿದ್ದಾರೆ. ಈ ವಿಡಿಯೋ ಬರೋಬ್ಬರಿ 3 ಗಂಟೆ 17 ನಿಮಿಷದಷ್ಟು ಸುದೀರ್ಘವಾಗಿದೆ. ವಿದೇಶೀ ಖಾಸಗಿ ಮಾಧ್ಯಮವೊಂದಕ್ಕೆ ನರೇಂದ್ರ ಮೋದಿ ನೀಡಿದ ಮೊದಲ ಸಂದರ್ಶನ ಇದಾಗಿದೆ.

ನರೇಂದ್ರ ಮೋದಿ ಅವರು ಲೆಕ್ಸ್ ಫ್ರೀಡ್​​ಮ್ಯಾನ್ ಅವರಿಗೆ ನೀಡಿರುವ ಈ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ದಿನಗಳವರೆಗೆ, ಹಾಗು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಪ್ರಧಾನಿಯಾಗುವವರೆಗಿನ ರಾಜಕೀಯ ಬೆಳವಣಿಗೆಯ ಹಂತಗಳು ಇವೆಲ್ಲದರ ಬಗ್ಗೆ ಮೋದಿ ಮಾತನಾಡಿದ್ದಾರೆ.

https://x.com/narendramodi/status/1901250031086076124

ಹಿಂದಿಯಲ್ಲೇ ಹೆಚ್ಚಾಗಿ ಮಾತನಾಡಿರುವ ನರೇಂದ್ರ ಮೋದಿ, ತಮ್ಮ ರಾಜಕೀಯ ವಿಚಾರಗಳಿಗೆ ಆರೆಸ್ಸೆಸ್​ನಿಂದ ಯಾವ ರೀತಿ ಪ್ರಭಾವ ಆಗಿದೆ, ಆ ಸಂಘಟನೆಯೊಂದಿಗೆ ತಮ್ಮಗಿದ್ದ ನಂಟು ಯಾವ ರೀತಿಯದ್ದು ಎಂಬುದನ್ನು ಸವಿಸ್ತಾರವಾಗಿ ಮಾತನಾಡಿದ್ದಾರೆ.

ಇಂದು ನಾನು ಅರ್ಥಮಾಡಿಕೊಂಡಂತೆ ಜಗತ್ತನ್ನು ನೋಡುವಾಗ, ನನ್ನ ಬಾಲ್ಯ ಮತ್ತು ನಾನು ಬೆಳೆದ ವಿಶಿಷ್ಟ ಪರಿಸರದ ಬಗ್ಗೆ ಯೋಚಿಸಬಹುದು. ನನ್ನ ಹಳ್ಳಿಯಲ್ಲಿ ಕೆಲವು ಆಕರ್ಷಕ ಅಂಶಗಳಿವೆ, ಅವುಗಳಲ್ಲಿ ಕೆಲವು ಜಾಗತಿಕವಾಗಿಯೂ ಸಹ ಅಪರೂಪ ಎಂದು ಹಳೆ ನೆನಪುಗಳನ್ನು ಬಿಚ್ಚಿಟ್ಟರು.

ಈ ವೇಳೆ ಆರೆಸ್ಸೆಸ್‌ ಜೀವನದ ಕುರಿತು ಮಾತನಾಡಿದ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ (ಆರ್‌ಎಸ್‌ಎಸ್) ಅಳವಡಿಸಲಾದ ಪ್ರಮುಖ ಮೌಲ್ಯಗಳಲ್ಲಿ ಒಂದು,ಜೀವನದಲ್ಲಿ ನೀವು ಏನೇ ಮಾಡಿದರೂ ಅದನ್ನು ಒಂದು ಉದ್ದೇಶದಿಂದ ಮಾಡಿ. ಜೀವನದಲ್ಲಿ ನಿಜವಾಗಿಯೂ ಉದ್ದೇಶ ಎಂದು ಕರೆಯಬಹುದಾದ ಕಡೆಗೆ ಆರ್‌ಎಸ್‌ಎಸ್ ನಿಮಗೆ ಸ್ಪಷ್ಟ ನಿರ್ದೇಶನವನ್ನು ನೀಡುತ್ತದೆ. ಇಲ್ಲಿ ರಾಷ್ಟ್ರವೇ ಎಲ್ಲವೂ, ಮತ್ತು ಜನರಿಗೆ ಸೇವೆ ಮಾಡುವುದು ದೇವರ ಸೇವೆಗೆ ಸಮಾನವಾಗಿದೆ ಎಂದು ಆರೆಸ್ಸೆಸ್‌ ಧ್ಯೇಯವನ್ನು ಹೇಳಿದರು.

ದೇಶದಲ್ಲಿ ಆರ್‌ಎಸ್‌ಎಸ್ ಒಂದು ಬೃಹತ್ ಸಂಘಟನೆ. 100ನೇ ವಾರ್ಷಿಕೋತ್ಸವದತ್ತ ಹೆಜ್ಜೆ ಇಡುತ್ತಿದೆ ಎಂದ ಪ್ರಧಾನಿ ಮೋದಿ, ಇಷ್ಟು ಬೃಹತ್ ಸ್ವಯಂಸೇವಕ ಸಂಘಟನೆ ಜಗತ್ತಿನಲ್ಲಿ ಬೇರೆಲ್ಲಿಯೂ ಅಸ್ತಿತ್ವದಲ್ಲಿಲ್ಲ. ಲಕ್ಷಾಂತರ ಜನರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ, ಆದರೆ ಆರ್‌ಎಸ್‌ಎಸ್ ಅನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದ ಹೇಳಿದರು.

ರಾಮಕೃಷ್ಣ ಮಿಷನ್, ಸ್ವಾಮಿ ವಿವೇಕಾನಂದರ ಬೋಧನೆಗಳು ಮತ್ತು ಆರ್‌ಎಸ್‌ಎಸ್‌ನ ಸೇವಾ ಆಧಾರಿತ ತತ್ವಶಾಸ್ತ್ರವು ನನ್ನನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ . ನಾನು ಸಂತರ ನಡುವೆ ಸ್ವಲ್ಪ ಸಮಯ ಕಳೆಯುವ ಅದೃಷ್ಟಶಾಲಿಯಾಗಿದ್ದೆ, ಅದು ನನಗೆ ಬಲವಾದ ಆಧ್ಯಾತ್ಮಿಕ ಅಡಿಪಾಯವನ್ನು ನೀಡಿತು. ನಾನು ಶಿಸ್ತು ಮತ್ತು ಉದ್ದೇಶದ ಜೀವನವನ್ನು ಕಂಡುಕೊಂಡೆ. ಮತ್ತು ಸಂತರ ಮಾರ್ಗದರ್ಶನದ ಮೂಲಕ ನಾನು ಆಧ್ಯಾತ್ಮಿಕ ನೆಲೆಯನ್ನು ಪಡೆದುಕೊಂಡೆ ಎಂದು ಮೋದಿ ಹೇಳಿದರು.

ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಸಂಭಾಷಣೆ
ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಪಾಡ್‌ಕಾಸ್ಟ್ ಬಗ್ಗೆ ಟ್ವೀಟ್ ಮಾಡಿರುವ ಎಂಐಟಿ ವಿಜ್ಞಾನಿ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧಕ ಲೆಕ್ಸ್ ಫ್ರಿಡ್‌ಮನ್, ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 3 ಗಂಟೆಗಳ ಮಹಾಕಾವ್ಯದ ಪಾಡ್‌ಕ್ಯಾಸ್ಟ್ ಸಂಭಾಷಣೆಯನ್ನು ನಡೆಸಿದೆ. ಇದು ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಸಂಭಾಷಣೆಗಳಲ್ಲಿ ಒಂದಾಗಿದೆ. ಇದು ನಾಳೆ ಹೊರಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆಕರ್ಷಕ ಸಂಭಾಷಣೆ ಎಂದ ಮೋದಿ
ಫ್ರಿಡ್‌ಮನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇದನ್ನು ‘ಆಕರ್ಷಕ ಸಂಭಾಷಣೆ’ ಎಂದು ಕರೆದಿದ್ದಾರೆ. ‘ಇದು ನಿಜಕ್ಕೂ ಫ್ರಿಡ್‌ಮನ್‌ ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿತ್ತು, ನನ್ನ ಬಾಲ್ಯ, ಹಿಮಾಲಯದಲ್ಲಿನ ವರ್ಷಗಳು ಮತ್ತು ಸಾರ್ವಜನಿಕ ಜೀವನದ ಪ್ರಯಾಣವನ್ನು ನೆನಪಿಸಿಕೊಳ್ಳುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ. ದಯವಿಟ್ಟು ಈ ಸಂವಾದದ ಭಾಗವಾಗಿರಿ’ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!