ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಮೇಲೆ ಅತ್ಯಾಚಾರ ,ಕೊಲೆ ಪ್ರಕರಣವನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಖಂಡಿಸಿದ್ದಾರೆ.
ಇದು ಬಹಳ ನೋವಿನ ವಿಚಾರ. ಈ ಸುದ್ದಿ ಕೇಳಿ ನನಗೆ ಆಘಾತ ಆಯ್ತು. ಈ ರೀತಿಯ ಕೆಟ್ಟ ಸಮಾಜದ ಭಾಗವಾಗಿದ್ದಕ್ಕೆ ನನಗೆ ನಾಚಿಕೆ ಆಗುತ್ತಿದೆ. ನಾವು ನಮ್ಮ ಆಲೋಚನೆ ಬದಲಾಯಿಸಬೇಕಿದೆ. ಹೆಣ್ಣು ಮತ್ತು ಗಂಡನ್ನು ಸಮಾನವಾಗಿ ನೋಡಬೇಕಿದೆ. ಕೃತ್ಯವನ್ನು ತಡೆಯದೆ ನೋಡುತ್ತಾ ನಿಂತಿದ್ದವರು ಹೇಡಿಗಳು ಎಂದು ಭಾವಿಸುತ್ತೇನೆ. ಇಂಥದ್ದೇ ಘಟನೆ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ನಡೆದಾಗ ನೋಡುತ್ತಾ ಸುಮ್ಮನೇ ಇರ್ತೀರಾ? ಎಂಬ ಪ್ರಶ್ನೆಯನ್ನು ಕೊಹ್ಲಿ ಕೇಳಿದ್ದಾರೆ.
ಕೊಹ್ಲಿ ಆಕ್ರೋಶದ ನುಡಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಕೃತ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಕೂಡಲೇ ಅತ್ಯಾಚಾರಿಗಳನ್ನು ಬಂಧಿಸಿ ತಮ್ಮ ಮುಂದೆ ಹಾಜರುಪಡಿಸಿ ಎಂದು ಹೈಕೋರ್ಟ್ ಆದೇಶಿಸಿದೆ.