ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊಲ್ಕತ್ತಾದ ಆರ್. ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಹತ್ಯೆಗೆ ಇಡೀ ದೇಶವೇ ಮರುಗುತ್ತಿದೆ. ಕಾಮುಕರನ್ನು ಅರೆಸ್ಟ್ ಮಾಡಿ ಅವರಿಗೆ ತಕ್ಕ ಶಿಕ್ಷೆಗೆ ಆಗ್ರಹಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಇಂದು ದೇಶಾದ್ಯಂತ ಖಾಸಗಿ ಆಸ್ಪತ್ರೆ ಬಂದ್ ಮಾಡಲು ಕರೆ ನೀಡಿದೆ. ಅದರಂತೆಯೇ ಬೆಂಗಳೂರಿನಲ್ಲೂ ಇದರ ಬಿಸಿ ತಟ್ಟಿದ್ದು, ದೂರದ ಊರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಬಂದು ರೋಗಿಗಳು ಹಿಂತಿರುವ ಪರಿಸ್ಥಿತಿ ಉಂಟಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಬಂದ್ ಹಿನ್ನಲೆ ದೂರದ ಊರಿನಿಂದ ಬೆಂಗಳೂರಿಗೆ ಬರುವ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಡಯಾಲಿಸಿಸ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಇಡೀ ದೇಶವೇ ಪ್ರಕರಣಕ್ಕೆ ಸ್ಪಂದಿಸುತ್ತಿದೆ. ಆದರೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮುಷ್ಕರದಿಂದ ಸಮಸ್ಯೆಯಾಗಿದೆ.