ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾದ ಪಿಜ್ಜಾ ಔಟ್‌ಲೆಟ್‌ಗೆ ದಿಢೀರ್ ಭೇಟಿ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಫ್ಲೋರಿಡಾದ ಫೋರ್ಟ್ ಮೈಯರ್ಸ್‌ನಲ್ಲಿರುವ ಡೌನ್‌ಟೌನ್ ಹೌಸ್ ಆಫ್ ಪಿಜ್ಜಾದಲ್ಲಿ ಅನಿರೀಕ್ಷಿತ ನಿಲುಗಡೆ ಸಮಯದಲ್ಲಿ, ಟ್ರಂಪ್ ತನ್ನ ಬೆಂಬಲಿಗರಿಗೆ ತಾವು ಅರ್ಧ ತಿಂದ ಪಿಜ್ಜಾವನ್ನು ನೀಡಿದರು. “ನಾನು ತಿಂದು ಬಿಟ್ಟ ಪಿಜ್ಜಾದಲ್ಲಿ ಯಾರಿಗಾದರೂ ಒಂದು ತುಂಡು ಬೇಕೇ?” ಎಂದು ಕೇಳುತ್ತಾ ಒಂದು ಸ್ಲೈಸ್ ತೆಗೆದು ಕಚ್ಚಿ ತಿಂದಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಟ್ರಂಪ್, ಟ್ರಂಪ್ ಎಂದು ಘೋಷಣೆ ಕೂಗಿದರು.
ಲೀ ಕೌಂಟಿ ರಿಪಬ್ಲಿಕನ್ ಪಾರ್ಟಿಯ ಲಿಂಕನ್ ರೇಗನ್ ಡಿನ್ನರ್‌ನಲ್ಲಿ ಮಾತನಾಡಿದ ನಂತರ ಟ್ರಂಪ್ ಪಿಜ್ಜಾ ಪಾರ್ಲರ್‌ಗೆ ಭೇಟಿ ನೀಡಿದರು. ಅವರ ವಿರುದ್ಧ ಅನೇಕ ಆರೋಪಗಳ ಹೊರತಾಗಿಯೂ ಟ್ರಂಪ್ ಪ್ರಸ್ತುತ 2024 ರ ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಮುಖ್ಯ ಅಭ್ಯರ್ಥಿಯಾಗಿದ್ದಾರೆ.
ಎರಡು ಬಾರಿ ದೋಷಾರೋಪಣೆಗೆ ಒಳಗಾದ ರಿಪಬ್ಲಿಕನ್ ನಾಯಕರಾಗಿ ಟ್ರಂಪ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಅಮೆರಿಕದ ಇತಿಹಾಸದಲ್ಲಿ ಪ್ರಾಸಿಕ್ಯೂಟರ್‌ಗಳಿಂದ ದೋಷಾರೋಪಣೆ ಮಾಡಿದ ಮೊದಲ ಮಾಜಿ ಅಧ್ಯಕ್ಷರಾಗಿದ್ದಾರೆ.
Trump stopped at a pizza place tonight after giving a speech in Fort Myers and handed out slices to supporters. He then took a bite out of a slice of pepperoni pizza and said, “Does anybody want a piece that I’ve eaten?” pic.twitter.com/KoZYAzuhma
— Kate Sullivan (@KateSullivanDC) April 22, 2023